ಬೆಂಗಳೂರು: ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ದೇವಾಂಶ್ ಡಿಸೈನರ್ ಬೊಟಿಕ್ (Devaansh Designer Boutique) ಮಾಲಕಿ ವಿರುದ್ಧ ಗಂಭೀರ ವಂಚನೆಯ ಆರೋಪ ಕೇಳಿಬಂದಿದೆ. ಫ್ಯಾಷನ್ ಡಿಸೈನಿಂಗ್ ಕೋರ್ಸ್ (Fashion Designer Course) ಹೆಸರಲ್ಲಿ ಲಕ್ಷಾಂತರ ರೂಪಾಯಿ ಶುಲ್ಕ (Fees) ಪಡೆದು, ಸಮರ್ಪಕವಾಗಿ ತರಬೇತಿ ನೀಡದೆ ಮೋಸ ಮಾಡಿದ್ದಾರೆ ಎಂದು ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.
ವೀಕೆಂಡ್ ಕ್ಲಾಸ್‌ಗಳಿಗೆ ₹50 ಸಾವಿರ ಮತ್ತು ವಾರದ ಕ್ಲಾಸ್‌ಗಳಿಗೆ ₹80 ಸಾವಿರದವರೆಗೆ ಶುಲ್ಕ ವಸೂಲಿ ಮಾಡಲಾಗಿದೆ. ಕೋರ್ಸ್ ಮುಗಿದ ನಂತರ ಫೋಟೋಶೂಟ್‌ಗೆಂದೇ ಪ್ರತಿ ವಿದ್ಯಾರ್ಥಿಯಿಂದ ₹40 ಸಾವಿರ ರೂಪಾಯಿಯನ್ನೂ ಸಂಗ್ರಹಿಸಲಾಗಿದೆ. ಹೀಗೆ ಒಟ್ಟು 30 ಜನರಿಂದ ಲಕ್ಷ ಲಕ್ಷ ಹಣ ವಸೂಲಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಕೋರ್ಸ್‌ನ ಅವಧಿ 2.5 ತಿಂಗಳು ಎಂದು ಹೇಳಿದ್ದರೂ, ಏಳು ತಿಂಗಳು ಕಳೆದರೂ ಏನೂ ಕಲಿಸಿಲ್ಲ. ಕೇವಲ ಸ್ಟಾಂಡರ್ಡ್ ಸೈಜ್‌ನ ಬ್ಲೌಸ್ ಡಿಸೈನ್ ಬಗ್ಗೆ ಮಾತ್ರ ಹೇಳಿಕೊಡಲಾಗಿದ್ದು, ಅತ್ಯಗತ್ಯವಾಗಿ ಬೇಕಾದ ಬಾಡಿ ಸೈಜ್ ಸ್ಟಿಚ್ಚಿಂಗ್ (Body Size Stitching) ಕುರಿತು ತರಬೇತಿ ನೀಡಿಲ್ಲ. ಇಷ್ಟೇ ಅಲ್ಲದೇ ಮೈಸೂರಿನಲ್ಲಿ ಮತ್ತೊಂದು ಬ್ರಾಂಚ್ ತೆರೆದು ಅಲ್ಲೂ ಮೋಸ ಮಾಡಲು ಪ್ಲಾನ್ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು (Studen) ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಎಲ್ಲಾ ಆರೋಪಗಳನ್ನು ದೇವಾಂಶ್ ಡಿಸೈನರ್ ಬೊಟಿಕ್‌ನ ಮಾಲಕರು ತಳ್ಳಿ ಹಾಕಿದ್ದಾರೆ. “ನಾವು ಯಾರಿಗೂ ಮೋಸ ಮಾಡಿಲ್ಲ, ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ,” ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.






