Home State Politics National More
STATE NEWS

Alert! | ಪಾರಿವಾಳಗಳಿಗೆ ಆಹಾರ ಹಾಕುವ ಮುನ್ನ ಯೋಚಿಸಿ; ನಿಯಮ ಮೀರಿದರೆ 6 ತಿಂಗಳು ಜೈಲು ಫಿಕ್ಸ್!

Pigeon Feeding Ban
Posted By: Meghana Gowda
Updated on: Dec 17, 2025 | 5:34 AM

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇನ್ಮುಂದೆ ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದಕ್ಕೆ ಬ್ರೇಕ್ ಬಿದ್ದಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.

ಪಾರಿವಾಳಗಳು (Pigeon) ಅತಿಯಾಗಿ ಗುಂಪು ಸೇರುವುದರಿಂದ ಈ ಕೆಳಗಿನ ಸಮಸ್ಯೆಗಳು ಎದುರಾಗುತ್ತಿವೆ ಎಂದು ಸರ್ಕಾರ ತಿಳಿಸಿದೆ.

  • ಶ್ವಾಸಕೋಶದ ಕಾಯಿಲೆ: ಪಾರಿವಾಳಗಳ ಗರಿಗಳು, ತ್ಯಾಜ್ಯ ಮತ್ತು ವಾಸನೆಯಿಂದ ಶ್ವಾಸಕೋಶದ ಗಂಭೀರ ಕಾಯಿಲೆಗಳು (Hypersensitivity Pneumonitis) ಉಂಟಾಗುವ ಸಾಧ್ಯತೆ ಇದೆ.

  • ತ್ಯಾಜ್ಯದಿಂದ ಕಂಟಕ: ಪಾರಿವಾಳದ ಹಿಕ್ಕೆಗಳು ಮತ್ತು ಹಾರುವ ರಕ್ಕೆಗಳಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ.

  • ದುರ್ಬಲರಿಗೆ ಅಪಾಯ: ಮಕ್ಕಳು, ವೃದ್ಧರು ಮತ್ತು ಮೊದಲೇ ಉಸಿರಾಟದ ಸಮಸ್ಯೆ ಇರುವ ವ್ಯಕ್ತಿಗಳ ಮೇಲೆ ಇದು ತೀವ್ರ ಪರಿಣಾಮ ಬೀರುತ್ತದೆ.

ಹೀಗಾಗಿ  ಇನ್ಮುಂದೆ ಜಿಬಿಎ (GBA) ಗುರುತಿಸಿರುವ ನಿಗದಿತ ಸ್ಥಳಗಳಲ್ಲಿ ಮಾತ್ರ ಪಾರಿವಾಳಗಳಿಗೆ ಆಹಾರ ಹಾಕಲು ಅವಕಾಶವಿದೆ. ಎಲ್ಲ ಸಮಯದಲ್ಲೂ ಆಹಾರ ಹಾಕುವಂತಿಲ್ಲ, ನಿಗದಿಪಡಿಸಿದ ಅವಧಿಯಲ್ಲಿ ಮಾತ್ರ ಅನುಮತಿ ನೀಡಲಾಗುತ್ತದೆ.  ನಿಯಮ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನೀಡಿದರೆ ಭಾರತೀಯ ನ್ಯಾಯ ಸಂಹಿತೆ (BNS) 270, 271 ಮತ್ತು 272 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು.

ಹಾಗೂ ಸಾಂಕ್ರಾಮಿಕ ರೋಗ ಹರಡಲು ಕಾರಣವಾದ ನಿರ್ಲಕ್ಷ್ಯದ ಆರೋಪದ ಮೇಲೆ ದಂಡದ ಜೊತೆಗೆ 6 ತಿಂಗಳವರೆಗೆ ಜೈಲು (6 months in jail)  ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ತಿಳಿಸಿದ್ದಾರೆ.

Shorts Shorts