ಧಾರವಾಡ: ಖಾವಿ ಬಟ್ಟೆ ಧರಿಸಿ ಮಠದ ಪಾವಿತ್ರ್ಯತೆ ಕಾಪಾಡಬೇಕಾದ ಸ್ವಾಮೀಜಿಯೊಬ್ಬರ ಅಸಹ್ಯಕರ ನಡವಳಿಕೆ ಈಗ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ. ಧಾರವಾಡ (Dharwad) ತಾಲೂಕಿನ ಕವಲಗೇರಿಯ ಶಿವಾನಂದ ಮಠದ ಸರಸ್ವತಿ ಸ್ವಾಮೀಜಿ (Saraswati Swamiji) ಅವರ ಕಾಮಪುರಾಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಿವಾನಂದ ಮಠದ ಸರಸ್ವತಿ ಸ್ವಾಮೀಜಿ (60)ಯ ರಹಸ್ಯ ಚಟುವಟಿಕೆಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇವಾಗ ವಿಡಿಯೋದ ಮೂಲಕ ಅವರ ರಾಸಲೀಲೆ ಬಯಲಾಗಿದೆ.
ಮಠದ ಒಳಗೇ ಮಹಿಳೆಯೊಬ್ಬರಿಂದ ಸ್ವಾಮೀಜಿ ಮೈಯೆಲ್ಲಾ ಎಣ್ಣೆ ಹಚ್ಚಿಸಿಕೊಂಡು ಮಸಾಜ್ (oil massage) ಮಾಡಿಸಿಕೊಳ್ಳುತ್ತಿದ್ದರು. ಮಸಾಜ್ ನಂತರ ಬೆತ್ತಲೆಯಾಗಿದ್ದ ಸ್ವಾಮೀಜಿಗೆ ಅದೇ ಮಹಿಳೆ ಬಿಸಿನೀರು ಸುರಿದು ಸ್ನಾನ ಮಾಡಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.
ವಯಸ್ಸು 60 ದಾಟಿದ್ದರೂ ಮಠಕ್ಕೆ ಬರುವ ಮಹಿಳೆಯರ ಜೊತೆ ಸ್ವಾಮೀಜಿ ಇಂತಹ ಲಂಪಟ ಕೆಲಸಕ್ಕೆ ಇಳಿದಿರುವುದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಸ್ವಾಮೀಜಿಯ ಈ ನವರಂಗಿ ಆಟದ ವಿಡಿಯೋಗಳನ್ನು ಸೆರೆಹಿಡಿದಿದ್ದ ಐವರು ಯುವಕರ ಗ್ಯಾಂಗ್, ಇದನ್ನು ಇಟ್ಟುಕೊಂಡು ಸ್ವಾಮೀಜಿಗೆ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿತ್ತು. ವಿಡಿಯೋ ಡಿಲೀಟ್ ಮಾಡಲು ಯುವಕರು 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಸುದೀರ್ಘ ಚೌಕಾಸಿಯ ನಂತರ 10 ಲಕ್ಷ ರೂಪಾಯಿಗೆ ಡೀಲ್ ಕುದಿರಿತ್ತು.
ಅಂಜಿ ಸ್ವಾಮೀಜಿ ಈಗಾಗಲೇ ಆ ಗ್ಯಾಂಗ್‌ಗೆ 7 ಲಕ್ಷ ರೂಪಾಯಿಗಳನ್ನು ನೀಡಿದ್ದರು. ಉಳಿದ 3 ಲಕ್ಷ ರೂಪಾಯಿ ನೀಡದ ಕಾರಣ ಆಕ್ರೋಶಗೊಂಡ ಕಿಡಿಗೇಡಿಗಳ ತಂಡ, ಸ್ವಾಮೀಜಿಯ ಎಣ್ಣೆ ಮಸಾಜ್ ಮತ್ತು ಸ್ನಾನದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರಸ್ವತಿ ಸ್ವಾಮೀಜಿ, ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಿದ ಗ್ಯಾಂಗ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. “ಆ ಮಹಿಳೆ ಸ್ವಲ್ಪ ಪರಿಚಯವಷ್ಟೇ, ಹಣ ಪಡೆದವರು ಯಾರೆಂದು ಗೊತ್ತಿಲ್ಲ” ಎಂದು ಸ್ವಾಮೀಜಿ ಹೇಳಿಕೊಂಡಿದ್ದಾರೆ. ಸದ್ಯ ಗ್ರಾಮಸ್ಥರು ಸ್ವಾಮೀಜಿಯ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮಠದ ಪಾವಿತ್ರ್ಯತೆ ಮಣ್ಣುಪಾಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.






