Home State Politics National More
STATE NEWS

Shocking News | ಹುರಿಗಡಲೆ ಪ್ರಿಯರೇ ಎಚ್ಚರ! ಆಕರ್ಷಕ ಹಳದಿ ಬಣ್ಣದ ಹಿಂದಿದೆ ‘ವಿಷ’…!

Adulterated roasted chickpeas seized gorakhpur health warning cancer risk
Posted By: Sagaradventure
Updated on: Dec 18, 2025 | 7:17 AM

ಹುರಿಗಡಲೆ (Roasted Chickpeas) ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಸಂಜೆ ಸ್ನ್ಯಾಕ್ಸ್ ಆಗಿ ಅಥವಾ ಪ್ರೋಟೀನ್ ಯುಕ್ತ ಆರೋಗ್ಯಕರ ಆಹಾರ ಎಂದು ಇದನ್ನು ಸೇವಿಸುವುದು ಸಾಮಾನ್ಯ. ಆದರೆ, ನೀವು ತಿನ್ನುವ ಹುರಿಗಡಲೆ ಅತಿಯಾದ ಹಳದಿ ಬಣ್ಣದಿಂದ (Bright Yellow) ಕಂಗೊಳಿಸುತ್ತಿದ್ದರೆ ಸ್ವಲ್ಪ ಎಚ್ಚರ ವಹಿಸುವುದು ಅಗತ್ಯ. ಏಕೆಂದರೆ, ಆಕರ್ಷಕವಾಗಿ ಕಾಣಲು ಇವುಗಳಿಗೆ ಅಪಾಯಕಾರಿ ರಾಸಾಯನಿಕಗಳನ್ನು ಬೆರೆಸಲಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇಂತಹ ಕಲಬೆರಕೆ ಆಹಾರ ಸೇವನೆಯಿಂದ ಲಿವರ್, ಕಿಡ್ನಿ ಡ್ಯಾಮೇಜ್ ಹಾಗೂ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಬರಬಹುದು.

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ (Gorakhpur) ಆಹಾರ ಇಲಾಖೆಯ ಅಧಿಕಾರಿಗಳು ಸೋಮವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 750 ಚೀಲಗಳಷ್ಟು ಕಲಬೆರಕೆ ಹುರಿಗಡಲೆಯನ್ನು ಜಪ್ತಿ ಮಾಡಿದ್ದಾರೆ. ರಾಜ್‌ಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋದಾಮೊಂದರ ಮೇಲೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದಾಗ ಈ ದಂಧೆ ಬೆಳಕಿಗೆ ಬಂದಿದೆ. ಜಪ್ತಿ ಮಾಡಲಾದ ಈ ವಿಷಪೂರಿತ ಹುರಿಗಡಲೆಯನ್ನು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಿಂದ ತರಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಅಧಿಕಾರಿಗಳ ಪ್ರಕಾರ, ಗ್ರಾಹಕರನ್ನು ಸೆಳೆಯಲು ಮತ್ತು ಹಳೆಯ ಅಥವಾ ಕಳಪೆ ಗುಣಮಟ್ಟದ ಹುರಿಗಡಲೆಯನ್ನು ಫ್ರೆಶ್ ಆಗಿ ಕಾಣುವಂತೆ ಮಾಡಲು, ಬಟ್ಟೆ ಮತ್ತು ಕಾಗದಕ್ಕೆ ಬಣ್ಣ ಹಾಕಲು ಬಳಸುವ ‘ಸಿಂಥೆಟಿಕ್ ಯೆಲ್ಲೋ ಡೈ’ (Synthetic Yellow Dye) ಅನ್ನು ಇದಕ್ಕೆ ಲೇಪಿಸಲಾಗಿತ್ತು. ಪರೀಕ್ಷೆಯ ವೇಳೆ ಈ ಹುರಿಗಡಲೆಯಲ್ಲಿ ಹೆಚ್ಚಿನ ಪ್ರಮಾಣದ ಹಾನಿಕಾರಕ ರಾಸಾಯನಿಕ ಇರುವುದು ದೃಢಪಟ್ಟಿದೆ. ಅಮಾಯಕ ಜನರು ಬಣ್ಣಕ್ಕೆ ಮರುಳಾಗಿ ಇಂತಹ ವಿಷವನ್ನು ಹಣ ಕೊಟ್ಟು ಖರೀದಿಸುತ್ತಿದ್ದಾರೆ. ಸಾರ್ವಜನಿಕರು ಆಹಾರ ಪದಾರ್ಥಗಳನ್ನು ಖರೀದಿಸುವಾಗ ಬಣ್ಣಕ್ಕಿಂತ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡುವಂತೆ ಎಚ್ಚರಿಸಲಾಗಿದೆ.

Shorts Shorts