ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ (A1) ಪವಿತ್ರಾ ಗೌಡ (Pavithra Gowda)ಅವರಿಗೆ ಈಗ ಜೈಲಿನಲ್ಲಿ ಟಿವಿ ಸವಲತ್ತು ದೊರೆಯಲಿದೆ. ನಟ ದರ್ಶನ್ (Darshan)ಅವರ ಬೆನ್ನಲ್ಲೇ ಪವಿತ್ರಾ ಗೌಡ ಕೂಡ ತಮ್ಮ ಸೆಲ್‌ನಲ್ಲಿ ಟಿವಿ ಸೇರಿದಂತೆ ಹಲವು ಸವಲತ್ತುಗಳನ್ನು ಪಡೆಯಲು ನ್ಯಾಯಾಲಯದಿಂದ ಅನುಮತಿ ಪಡೆದಿದ್ದಾರೆ.
ಪವಿತ್ರಾ ಗೌಡ ಅವರ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ 57ನೇ ಸೆಷನ್ಸ್ ಕೋರ್ಟ್(57th Sessions Court), ಜೈಲು ಅಧಿಕಾರಿಗಳಿಗೆ ಜೈಲಿನಲ್ಲಿ ಲಭ್ಯವಿದ್ದಲ್ಲಿ ಪವಿತ್ರಾ ಗೌಡ ಅವರ ಸೆಲ್‌ನಲ್ಲಿ ಟಿವಿಯನ್ನು ಅಳವಡಿಸಬೇಕು. ಅವರಿಗೆ ಪ್ರತಿದಿನ ದಿನಪತ್ರಿಕೆಗಳನ್ನು ಹಾಗೂ ಜೈಲಿನ ಗ್ರಂಥಾಲಯದಿಂದ ಓದಲು ಪುಸ್ತಕಗಳನ್ನು(Library books) ಒದಗಿಸಬೇಕು. ಹಾಗೂ ರೇಡಿಯೋ, ಸಂಗೀತ ಮತ್ತು ಧ್ಯಾನ ಮಾಡಲು ಅವಕಾಶ ಎಂದು ಸೂಚನೆಗಳನ್ನು ನೀಡಿದೆ.
ಕರ್ನಾಟಕ ಕಾರಾಗೃಹ ನಿಯಮಾವಳಿ 749ರ ನಿಯಮ 6ರ ಅಡಿಯಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಉಭಯ ಕಡೆಗಳ ವಾದವನ್ನು ಆಲಿಸಿದ ನ್ಯಾಯಾಲಯವು, ಈ ಸೌಲಭ್ಯಗಳನ್ನು ಒದಗಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಇತ್ತೀಚೆಗಷ್ಟೇ ಇದೇ ಪ್ರಕರಣದ ಮತ್ತೊಬ್ಬ ಆರೋಪಿ ನಟ ದರ್ಶನ್ ಅವರ ಸೆಲ್‌ನಲ್ಲೂ ಟಿವಿ ಅಳವಡಿಸಲಾಗಿತ್ತು ಎಂಬುದು ಗಮನಾರ್ಹ.






