ಅಂಕೋಲಾ (Ankola): ತಮ್ಮ ರಾಜಕೀಯ ಭವಿಷ್ಯದ ನಿರ್ಣಾಯಕ ಹಂತದಲ್ಲಿರುವ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಇಂದು ಅಂಕೋಲಾದ ಅಂತೆ ಜಗದೀಶ್ವರಿ ದೇಗುಲದಲ್ಲಿ (Jagadeeshwari temple)ಅತ್ಯಂತ ರಹಸ್ಯವಾಗಿ ಪೂಜೆ ಸಲ್ಲಿಸುತ್ತಿದ್ದಾರೆ. ವಿಶೇಷವೆಂದರೆ, ದೇವಿಯ ಮುಂದೆ ‘ಪ್ರಶ್ನಾ ಫಲ’ ಕೇಳುವ ಹೊತ್ತಿನಲ್ಲಿ ಅಲ್ಲಿ ಉಪಸ್ಥಿತರಿದ್ದ ಪತ್ರಕರ್ತರು ಮತ್ತು ಕ್ಯಾಮರಾಮನ್‌ಗಳಿಗೆ ಹೊರಗೆ ಹೋಗುವಂತೆ ಸೂಚನೆ ನೀಡಿದ್ದಾರೆ.
ಏಕಾಂತ ಪೂಜೆಗೆ ಆದ್ಯತೆ:
ಜಗದೀಶ್ವರಿ ದೇವಿಯು ‘ಹಿಂಗಾರ’ (ಹೊಂಬಾಳೆ) ಬೀಳಿಸುವ ಮೂಲಕ ಭವಿಷ್ಯದ ಸೂಚನೆ ನೀಡುತ್ತಾಳೆ ಎಂಬುದು ಭಕ್ತರ ನಂಬಿಕೆ. ಈ ಪ್ರಕ್ರಿಯೆಯು ಅತ್ಯಂತ ಪವಿತ್ರ ಮತ್ತು ವೈಯಕ್ತಿಕವಾದುದು ಎಂಬ ಕಾರಣಕ್ಕೆ ಡಿಕೆಶಿ ಅವರು ಮಾಧ್ಯಮದವರನ್ನು ಪೂಜಾ ಸ್ಥಳದಿಂದ ದೂರ ಇರಿಸಿದ್ದಾರೆ ಎನ್ನಲಾಗಿದೆ.
2019ರಲ್ಲೂ ಇದೇ ರೀತಿ ಏಕಾಂತವಾಗಿ ಪೂಜೆ ಸಲ್ಲಿಸಿದ್ದ ಡಿಕೆಶಿ, ಈಗ ರಾಜ್ಯ ರಾಜಕಾರಣದ ಮುಂದಿನ ನಡೆಗಳ ಬಗ್ಗೆ (CM ಹುದ್ದೆ) ದೇವಿಯ ಮುಂದೆ ಪ್ರಶ್ನೆಗಳನ್ನು ಇರಿಸಲಿದ್ದಾರೆ ಎನ್ನಲಾಗುತ್ತಿದೆ.
ಪೂಜಾ ಕಾರ್ಯಕ್ರಮದ ಗೌಪ್ಯತೆಯನ್ನು ಕಾಪಾಡಲು ಪೊಲೀಸರು ಮತ್ತು ದೇವಾಲಯದ ಆಡಳಿತ ಮಂಡಳಿ ಮಾಧ್ಯಮದವರನ್ನು ತಡೆದಿದ್ದಾರೆ ಎಂದು ತಿಳಿದುಬಂದಿದೆ.






