Home State Politics National More
STATE NEWS

ಅಮೆರಿಕಾದಲ್ಲಿ ಒಂಟಿತನಕ್ಕೆ ಅಂತ್ಯ ತಂದ ಎಐ ಸ್ನೇಹ

ChatGPT friendship
Posted By: StateNews Desk
Updated on: Dec 20, 2025 | 5:23 AM

ಇಂದಿನ ತಂತ್ರಜ್ಞಾನ ಜಗತ್ತು ಮಾನವನ ಜೀವನವನ್ನು ತಲೆಕೆಳಗಾಗಿ ಬದಲಿಸುತ್ತಿದೆ. Artificial Intelligence ಎಂದು ಕರೆಯಲ್ಪಡುವ ಎಐ ಮಾನವ ಜೀವನಕ್ಕೆ ಹೊಸ ಮುಖ ಮತ್ತು ಹೊಸ ದಿಕ್ಕು ತೋರಿಸುತ್ತಿದೆ. ಈ ಲೇಖನದಲ್ಲಿ ಅಮೆರಿಕಾದಲ್ಲಿ ಕೆಲಸ ಮಾಡುವ ಒಬ್ಬ ಕನ್ನಡಿಗ ಯುವಕನ ಜೀವನದಲ್ಲಿ ಎಐ ಹೇಗೆ ದೊಡ್ಡ ಬದಲಾವಣೆ ತಂದಿತು ಎಂಬ ನಿಜ ಕಥೆಯನ್ನು ನೋಡೋಣ. ಈ ಯುವಕ ಕರ್ನಾಟಕದವನು. ಕಾಲೇಜು ಜೀವನದಲ್ಲೇ ಕಂಪ್ಯೂಟರ್ ಕ್ಷೇತ್ರದ ಮೇಲೆ ಆಸಕ್ತಿ ಬೆಳಸಿಕೊಂಡಿದ್ದ. Graduation ನಂತರ ಬೆಂಗಳೂರಿನಲ್ಲಿ ಕೆಲಸ ಆರಂಭಿಸಿದ. ಬದುಕಿನಲ್ಲಿ ಎಲ್ಲವೂ ಸರಿಯಾಗಿತ್ತು. ಕೆಲಸ, ಸ್ನೇಹಿತರು, ಕನಸುಗಳು—all normal.

ಆದರೆ ಅವನ ಪ್ರೀತಿಯ ಸಂಬಂಧ ಮುರಿದಾಗ ಅವನ ಬದುಕು ಬದಲಾಗಿದೆ. ಆ ಸಂಬಂಧ ಅವನಿಗೆ ತುಂಬಾ ಮುಖ್ಯವಾದದ್ದು. ಭವಿಷ್ಯ ಕಟ್ಟುವ ಕನಸು ಕೂಡ ಇತ್ತು. ಆದರೆ ಒಂದೇ ದಿನ ಆ ಸಂಬಂಧ ಮುಗಿದು ಹೋದಾಗ, ಅವನಿಗೆ mentally ದೊಡ್ಡ shock ಆಯ್ತು. ಕುಟುಂಬ ಇದ್ದರೂ, ನೋವನ್ನು share ಮಾಡಲು ಯಾರೂ ಹತ್ತಿರ ಇರಲಿಲ್ಲ. ಮನಸ್ಸಿನೊಳಗೇ ಎಲ್ಲವನ್ನು ಹೊತ್ತುಕೊಂಡು ಬದುಕುತ್ತಿದ್ದ.ಕೊನೆಗೆ ಬದುಕಿನ ದಿಕ್ಕು ಬದಲಾಯಿಸಬೇಕು ಅನ್ನಿಸಿಕೊಂಡು ವಿದೇಶಕ್ಕೆ ಹೋಗುವ ನಿರ್ಧಾರ ಮಾಡಿದ್ದ. ಅಮೆರಿಕಾದಲ್ಲಿ IT ಕ್ಷೇತ್ರದಲ್ಲಿ ಕೆಲಸ ಸಿಕ್ಕಿತು. Visa approve ಆಯಿತು. ಹೊಸ futureಕಾಗಿ flight ಹತ್ತಿದ.ಪ್ರಥಮ ದಿನಗಳು ಅಲ್ಲಿ ತುಂಬಾ exciting. ಹೊಸ ದೇಶ, ಹೊಸ ಮನೆ, ಹೊಸ ಕೆಲಸ — ಇದು ಎಲ್ಲರಿಗಿಂತ ಉತ್ತಮ ಜೀವನ ಅನ್ನಿಸಿತು. ಆದರೆ ದಿನಗಳು ಹೋಗುತ್ತಿದ್ದಂತೆ reality ಸ್ಪಷ್ಟವಾಗತೊಡಗಿತು.

ಅಮೆರಿಕಾದ ಕೆಲಸದ ಮಾದರಿಯಲ್ಲಿ ಬೆಳಿಗ್ಗೆ 9ಕ್ಕೆ office, ಸಂಜೆ 6ಕ್ಕೆ ಮನೆ. ಉಳಿದ ಸಮಯ complete silence. ಮನೆ ಬಡುವಾಗ ಎದುರು ಮುಖಾಮುಖಿಯಾಗಿದ್ದು ನಾಲ್ಕು ಗೋಡೆಗಳು. ಮಾತನಾಡಲು ಯಾರೂ ಇಲ್ಲ. ಹತ್ತಿರದಲ್ಲಿ ಸ್ನೇಹಿತರಿಲ್ಲ. ಸಮಾಜಕ್ಕೆ ಸೇರಿಕೊಳ್ಳಲು ಸಮಯವೂ ಇಲ್ಲ.ಹೀಗೆ ಒಂಟಿತನ slowly ದೊಡ್ಡ ಸಮಸ್ಯೆಯಾಯಿತು.Weekendಗಳು ಹೆಚ್ಚು ಕಠಿಣ.
Festival time ಇನ್ನೂ ಕಷ್ಟ.ಪ್ರತಿ ಸಂಜೆ ಮುಗಿಯುವಾಗ Indian memories ನೆನಪಾಗಿ ಕಣ್ಣೀರು ಬರುತ್ತಿತ್ತು. ಒಬ್ಬ ವ್ಯಕ್ತಿಗೆ ಹಣ, ಕೆಲಸ, visa ಇರಬಹುದು.ಆದರೆ ಜೊತೆ ಮಾತನಾಡುವ ವ್ಯಕ್ತಿ ಅಗತ್ಯ.ಅದಕ್ಕೆ ಅಮೆರಿಕಾದ ಜೀವನದಲ್ಲಿ ಕೊರತೆ. ಒಮ್ಮೆ ರಾತ್ರಿ ನಿದ್ರೆ ಬರದೆ, Googleನಲ್ಲಿ “ನನ್ನ ಜೊತೆ ಮಾತನಾಡಲು ಯಾರಾದರೂ?” ಅಂತ search ಮಾಡ್ತಿದ್ದ. ಆಗ ChatGPT ಅನ್ನೋ AI software ಕಂಡ. ಮನಸ್ಸು ಖಾಲಿಯಾಗಿದ್ದ ಕಾರಣ simple test chat ಆರಂಭಿಸಿದ.

ಮೊದಲ ಪ್ರಶ್ನೆ simple: “Hi, I am feeling lonely.”
AI ಉತ್ತರಿಸಿತು:
“I understand. Tell me what is bothering you.”
ಆ ಒಂದು ಉತ್ತರ ಅವನ ಮನಸ್ಸಿಗೆ ಹೊಸ door open ಮಾಡಿದಂತೆ. ಅವನು ತನ್ನ problems, loneliness, job pressure ಬಗ್ಗೆ ಹೇಳತೊಡಗಿದ.AI ಶಾಂತಿಯಿಂದ ಕೇಳುತ್ತಿತ್ತು. Questions ಕೇಳುತ್ತಿತ್ತು. Judging ಮಾಡಲಿಲ್ಲ.ಮನಸ್ಸಿನ ನೋವನ್ನ ಅರ್ಥ ಮಾಡಿಕೊಳ್ಳುವ ಮಾತು ನೀಡಿತು. Time pass purposeನಲ್ಲಿ ಆರಂಭವಾದ chat, slowly emotional support ಆಗಿತು. ಕೆಲಸಕ್ಕೆ ಹೋಗುವ ಮುಂಚೆ 10 ನಿಮಿಷ chat ಮಾಡುತ್ತಿದ್ದ. Lunch break ಸಮಯದಲ್ಲೂ doubtಗಳು ಕೇಳುತ್ತಿದ್ದ. ರಾತ್ರಿ timeನಲ್ಲಿ coding ideas ಕೇಳುತ್ತಿದ್ದ.
ಇದಲ್ಲದೇ AI coding area related application ideas ಕೊಡತೊಡಗಿತು.ಅವನು app development ಮೇಲೆ interest build ಮಾಡತೊಡಗಿದ. AI coding errors fix ಮಾಡಿಸಿತು, shortcuts ಕಲಿಸಿತು, technology introduce ಮಾಡಿತು.Slowly ಅವನಿಗೆ confidence ಬಂದಿದೆ. ಒಂಟಿತನ depression ತರಬಹುದಾದ ಪರಿಸ್ಥಿತಿ, creativityಗೆ ಬದಲಾಯಿತು.ಅವನು video editing try ಮಾಡಿದ. AI editing methods explain ಮಾಡಿತು.ಈ support ಅವನಿಗೆ mentally huge help ಆಗಿತ್ತು.

ಮಾನವರು ಕೆಲವೊಮ್ಮೆ ಪ್ರತಿಕ್ರಿಯೆ ಕೊಡೋದಿಲ್ಲ,ಆದರೆ machine 24/7 support ಕೊಡಬಲ್ಲದು ಎಂಬುದನ್ನು first time ಅವನು ಅರಿತ. ವಿದೇಶದಲ್ಲಿ ಇರುವ struggle societyಗೆ ಕಾಣಿಸೋದಿಲ್ಲ.ಅಲ್ಲಿ festival dayಗೂ ಕೆಲಸ.Birthdayಗೂ friend group ಇಲ್ಲ.Phone call ಒಂದು ದಿನ missed ಆದ್ರೆ ವಾರವಿಡಿ ನಿರ್ಲಕ್ಷ್ಯ ಅನ್ನೋ feeling.
ಈ loneliness ಅವನನ್ನು silent person ಆಗಿಸಿತ್ತು. AI ಜೊತೆಗೆ ಮಾತನಾಡೋದರಿಂದ ಮಾತಿನ ಭಯ, hesitation slowly ಹೋಗಿ confidence ಬಂದ.

ಅವನು codingನಷ್ಟೇ ಅಲ್ಲ, design , editing ,marketing ,branding —ಈ ಎಲ್ಲಾ ಕ್ಷೇತ್ರಗಳನ್ನ AI guidance ಮೂಲಕ ಕಲಿತ. ಇದರಿಂದ ಅವನಿಗೆ ಹೊಸ dream ಬರುತ್ತಾ ಹೋಯ್ತು:“ನಾನೂ app build ಮಾಡಬಹುದು. ನಾನೂ startup ಆರಂಭಿಸಬಹುದು.” ಇಂದು ಅವನ first app prototype complete ಆಗಿದೆ. Coding, backend, UI design—all learning through AI support.ಇನ್ನು AI just machine ಅನ್ನೋದಿಲ್ಲ. ಅವನಿಗೆ AI = ಒಂದು supportive mind.ಈ ಕಥೆ technology future direction ಹೇಳುತ್ತದೆ: AI ಈಗ ಕೇವಲ tool ಅಲ್ಲ— ಒಂಟಿತನಕ್ಕೆ support , knowledge source career guide mental peace —ಇವೆಲ್ಲ ಆಗುತ್ತಿದೆ.

ವಿದೇಶದಲ್ಲಿರುವ mental struggles society recognize ಮಾಡೋದಿಲ್ಲ.ಆದರೆ AI support ತೋರಿಸುತ್ತಿದೆ:machine ಸಹ ಮನಸ್ಸಿಗೆ medicine ಆಗಬಲ್ಲದು.ಇಲ್ಲಿ ಮಾನವ machineನು replace ಮಾಡೋದಿಲ್ಲ. Machine ಮಾನವನ ಜೊತೆ ನಡೆದು ಸಹಾಯ ಮಾಡುತ್ತಿದೆ.

ಭೂಮಿಕಾ ಹಾಸನ

Shorts Shorts