ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ (Yellow Line) ಪ್ರಯಾಣಿಸುವವರಿಗೆ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದೆ. ಡಿಸೆಂಬರ್ 21ರ ಭಾನುವಾರ ಬೆಳಿಗ್ಗೆ ತುರ್ತು ವ್ಯವಸ್ಥಾ ನಿರ್ವಹಣೆ ಹಾಗೂ ನವೀಕರಣ ಕಾರ್ಯಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಮೆಟ್ರೋ ರೈಲು ಸಂಚಾರವು ಒಂದು ಗಂಟೆ ತಡವಾಗಿ ಆರಂಭವಾಗಲಿದೆ.
ಸಾಮಾನ್ಯವಾಗಿ ಭಾನುವಾರ ಬೆಳಿಗ್ಗೆ 7:00 ಗಂಟೆಗೆ ಮೊದಲ ಮೆಟ್ರೋ ರೈಲು ಹೊರಡುತ್ತಿತ್ತು. ಆದರೆ ನಿರ್ವಹಣಾ ಕಾರ್ಯದ ಕಾರಣದಿಂದ ನಾಳೆ ಬೆಳಿಗ್ಗೆ 8:00 ಗಂಟೆಗೆ ಮೊದಲ ರೈಲು ಸಂಚಾರ ಆರಂಭವಾಗಲಿದೆ.
ಬೆಳಿಗ್ಗೆ 8:00 ಗಂಟೆಯ ನಂತರದ ಮೆಟ್ರೋ ರೈಲುಗಳು ಭಾನುವಾರದ ಸಾಮಾನ್ಯ ವೇಳಾಪಟ್ಟಿಯಂತೆಯೇ ಸಂಚರಿಸಲಿವೆ. ಈ ಸಮಯದ ಬದಲಾವಣೆಯು ಕೇವಲ ಒಂದು ದಿನಕ್ಕೆ (ಡಿಸೆಂಬರ್ 21, ಭಾನುವಾರ) ಮಾತ್ರ ಸೀಮಿತವಾಗಿದೆ ಎಂದು ತಿಳಿಸಿದ್ದಾರೆ.
ಬಿಎಂಆರ್‌ಸಿಎಲ್ (BMRCL) ನೀಡಿರುವ ಪ್ರಕಟಣೆಯ ಪ್ರಕಾರ, ಮೆಟ್ರೋದ ನೇರಳೆ (Purple Line) ಮತ್ತು ಹಸಿರು (Green Line) ಮಾರ್ಗಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಮಾರ್ಗಗಳಲ್ಲಿ ರೈಲುಗಳು ಎಂದಿನಂತೆ ಸಂಚರಿಸಲಿವೆ.
ಹಳದಿ ಮಾರ್ಗದಲ್ಲಿ ಪ್ರಯಾಣಿಸುವವರು ಈ ಬದಲಾವಣೆಯನ್ನು ಗಮನಿಸಿ ತಮ್ಮ ಪ್ರಯಾಣದ ಯೋಜನೆಯನ್ನು ರೂಪಿಸಿಕೊಳ್ಳಲು ಸೂಚಿಸಲಾಗಿದೆ.






