ಶಿವಮೊಗ್ಗ: ಪಿಯುಸಿ ವಿದ್ಯಾರ್ಥಿ ತುಂಗಾ ನದಿಯಲ್ಲಿ (Tunga River) ಈಜಲು ಹೋಗಿ ಮೃತಪಟ್ಟಿರುವ ಘಟನೆ ಘಟನೆ ಶಿವಮೊಗ್ಗ ತಾಲೂಕಿನ ಪಿಳ್ಳಂಗಿರಿ (Pillangiri) ಗ್ರಾಮದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ನಗರದ ಕಾಮಾಕ್ಷಿ ಬೀದಿ ನಿವಾಸಿ, ಡಿವಿಎಸ್ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಪ್ರೇಮ್ ಕುಮಾರ್ (17) ಎಂದು ಗುರುತಿಸಲಾಗಿದೆ. ಪ್ರೇಮ್ ಕುಮಾರ್ ಇಂದು ತನ್ನ ಸ್ನೇಹಿತರೊಂದಿಗೆ ಪಿಳ್ಳಂಗಿರಿ ಗ್ರಾಮದ ದೇವಸ್ಥಾನಕ್ಕೆ ಪ್ರವಾಸಕ್ಕೆ ತೆರಳಿದ್ದನು. ದೇವಸ್ಥಾನದ ದರ್ಶನ ಮುಗಿಸಿ ಹಿಂತಿರುಗುವ ಮೊದಲು, ಸ್ನೇಹಿತರ ಜೊತೆ ಸೇರಿ ತುಂಗಾ ನದಿಯಲ್ಲಿ ಈಜಲು ಇಳಿದಿದ್ದಾನೆ
ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಹೊರತೆಗೆದಿದ್ದಾರೆ.






