ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಈಗ ‘ಕಿಚ್ಚ’ ಸುದೀಪ್ (Kichcha Sudeep) ಮತ್ತು ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ (Darshan) ಅಭಿಮಾನಿಗಳ ನಡುವೆ ಪರೋಕ್ಷ ಸಮರ ಶುರುವಾಗಿದೆ. ಸುದೀಪ್ ಅವರ ‘ಮಾರ್ಕ್’ (Mark) ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಇಬ್ಬರ ನಡುವಿನ ಈ ಪರೋಕ್ಷ ಕಿತ್ತಾಟ ಈಗ ಹಾದಿರಂಪ ಬೀದಿರಂಪವಾಗುವ ಲಕ್ಷಣ ಕಾಣುತ್ತಿದೆ.
ಹುಬ್ಬಳ್ಳಿಯಲ್ಲಿ ಗುಡುಗಿದ್ದ ಸುದೀಪ್
ತಮ್ಮ ಮುಂಬರುವ ಸಿನಿಮಾ ‘ಮಾರ್ಕ್’ನ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಮಾತನಾಡಿದ್ದ ಸುದೀಪ್, ಯಾರ ಹೆಸರನ್ನೂ ಹೇಳದೆ ಪರೋಕ್ಷವಾಗಿ ಯುದ್ಧದ ಮುನ್ಸೂಚನೆ ನೀಡಿದ್ದರು. “ಒಂದು ಕಡೆ ಯುದ್ಧಕ್ಕೆ ರೆಡಿ ಆಗ್ತಿದೆ.. ನಾವು ಆ ಯುದ್ಧಕ್ಕೆ ಸಿದ್ಧ. ಯಾಕೆಂದರೆ ನಾವು ಮಾತಿಗೆ ಬದ್ಧ” ಎಂದಿದ್ದಾರೆ.
ಇಷ್ಟು ದಿನ ನಿಮಗೋಸ್ಕರ ಸುಮ್ಮನಿದ್ದೆ. ತಡೆಯೋ ತನಕ ತಡೀರಿ, ಮಾತಾಡೋ ಟೈಮಲ್ಲಿ ಮಾತಾಡಿ. ಡಿಸೆಂಬರ್ 25ಕ್ಕೆ ಸಿನಿಮಾ ಬಿಡುಗಡೆ ಆಗುತ್ತೆ, ಎಲ್ಲಿ ತಟ್ಟಬೇಕೋ ಅಲ್ಲಿ ತಟ್ಟುತ್ತೆ” ಎಂದು ಗರ್ಜಿಸಿದ್ದರು.
ದಾವಣಗೆರೆಯಲ್ಲಿ ವಿಜಯಲಕ್ಷ್ಮಿ ತಿರುಗೇಟು
ಸುದೀಪ್ ಅವರ ಈ ಮಾತಿಗೆ ದಾವಣಗೆರೆಯಲ್ಲಿ ನಡೆದ ‘ಡೆವಿಲ್’ (Devil) ವಿಜಯ ಯಾತ್ರೆಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಖತ್ ಟಕ್ಕರ್ ಕೊಟ್ಟಿದ್ದಾರೆ.
“ದರ್ಶನ್ ಇಲ್ದೇ ಇರುವಾಗ ಕೆಲವೊಬ್ಬರು ಚಾನೆಲ್ಗಳಲ್ಲಿ ಕೂತು ಏನೇನೋ ಮಾತಾಡ್ತಾರೆ. ದರ್ಶನ್ ಬಂದಾಗ ಇವರು ಬೆಂಗಳೂರಲ್ಲಿ ಇರ್ತಾರೋ ಇಲ್ಲವೋ ಗೊತ್ತಿಲ್ಲ, ಆ ಜನ ಎಲ್ಲಿ ಮಾಯ ಆಗ್ತಾರೋ ಗೊತ್ತಿಲ್ಲ” ಎಂದು ಸುದೀಪ್ ಹೆಸರು ಎತ್ತದೆ ಟಾಂಗ್ ನೀಡಿದ್ದಾರೆ.
ಯಾರೇ ಏನೇ ಅಂದರೂ ಕೋಪ ಮಾಡಿಕೊಳ್ಳಬೇಡಿ, ನೊಂದುಕೊಳ್ಳಬೇಡಿ ಎಂದು ದರ್ಶನ್ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.






