ಬೆಂಗಳೂರು: ಕನಕಪುರದಲ್ಲಿ ನಡೆಯಲಿರುವ ‘ಕನಕೋತ್ಸವ’ದ (Kanakotsava) ಆಮಂತ್ರಣ ನೀಡುವ ಭರದಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh) ಅವರ ಸೋಷಿಯಲ್ ಮೀಡಿಯಾದ ಎಡವಟ್ಟೊಂದು ಈಗ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. Google Gemini AI ತಂತ್ರಜ್ಞಾನ ಬಳಸಿ ಫೋಟೋ ರಿಫೈನ್ ಮಾಡಲು ಹೋಗಿ, ಈಗ ನೆಟ್ಟಿಗರ ವ್ಯಂಗ್ಯಕ್ಕೆ ಆಹಾರವಾಗಿದ್ದಾರೆ.
ನಡೆದಿದ್ದೇನು?
ಕನಕೋತ್ಸವಕ್ಕೆ ಚಿತ್ರರಂಗದವರನ್ನು ಆಹ್ವಾನಿಸಲು ಡಿ.ಕೆ. ಸುರೇಶ್ ಅವರು ಕಂಠೀರವ ಸ್ಟೇಡಿಯಂನಲ್ಲಿ ನಟ ಶಿವರಾಜಕುಮಾರ್ ಹಾಗೂ ನಟಿ ರಚಿತಾ ರಾಮ್ (Rachita Ram) ಅವರನ್ನು ಭೇಟಿ ಮಾಡಿದ್ದರು. ಈ ಭೇಟಿಯ ಫೋಟೋಗಳನ್ನು ಹಂಚಿಕೊಳ್ಳುವಾಗ ರಚಿತಾ ರಾಮ್ ಅವರ ಫೋಟೋವನ್ನು ಎಡಿಟ್ ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳಲಾಗಿದೆ.
AI ಎಡಿಟಿಂಗ್ ಎಡವಟ್ಟುಗಳು
ರಚಿತಾ ರಾಮ್ ಅವರ ತಲೆಯ ಮೇಲಿದ್ದ ಹೇರ್ ಕ್ಲಿಪ್ ತೆಗೆಯಲು AI ಬಳಸಲಾಗಿದ್ದು, ಅದರಿಂದ ಫೋಟೋದ ನೈಜತೆ ಹಾಳಾಗಿದೆ. ಎಡಿಟ್ ಮಾಡಿದ ಫೋಟೋದ ಮೂಲೆಯಲ್ಲಿ ‘Gemini AI’ ಲೋಗೋ ಹಾಗೆಯೇ ಉಳಿದುಕೊಂಡಿದೆ .
ಫೋಟೋದ ಪಕ್ಕದಲ್ಲಿದ್ದ ಬ್ಯಾಗ್ ಮೇಲಿನ ಅಕ್ಷರಗಳು ಬ್ಲರ್ (Blur) ಆಗಿದ್ದು, ಚಿತ್ರದ ಗುಣಮಟ್ಟ ಕುಸಿದಿದೆ. ಹಾಗೂ AI ರಿಫೈನ್‌ಮೆಂಟ್‌ನಿಂದಾಗಿ ರಚಿತಾ ರಾಮ್ ಅವರ ಮುಖದ ಚಹರೆಯೇ ಬದಲಾದಂತೆ ಕಾಣುತ್ತಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಲೆಳೆಯಲು ಶುರು ಮಾಡಿದ್ದಾರೆ. “ಕೋಟಿ ಕೋಟಿ ಆಸ್ತಿ ಇದೆ, ಒಂದು ಫೋಟೋ ಎಡಿಟ್ ಮಾಡಲು ಒಬ್ಬ ಒಳ್ಳೆಯ ಎಡಿಟರ್ ಇಲ್ವಾ?” ಎಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ಸುರೇಶ್ ಅವರು ಆಹ್ವಾನ ಪತ್ರ ನೀಡುತ್ತಿರುವ ಶೈಲಿಯನ್ನು ನೋಡಿ, “ಇದು ಆಹ್ವಾನವೋ ಅಥವಾ ಆದೇಶವೋ?” ಎಂದು ವ್ಯಂಗ್ಯವಾಡಿದ್ದಾರೆ.

AI ಎಡಿಟಿಂಗ್ ಎಡವಟ್ಟುಗಳು




