ಕೋಲಾರ: ಕುಡಿಯುವ ನೀರೆಂದು ಭಾವಿಸಿ ಪೇಯಿಂಟ್ ಮಿಕ್ಸ್ ಮಾಡುವ ಟಿನ್ನರ್ (Thinner) ಕುಡಿದು ಮೂರು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯಲ್ಲಿ ನಡೆದಿದೆ.
ಛಾನ್ಸಿ ಅಲಿಯಾಸ್ ಜಾನು (Jhansi alias Janu)(3) ಮೃತಪಟ್ಟ ಮಗು. ಬಾಲಕಿ ಎರಡು ದಿನಗಳ ಹಿಂದೆ ಮನೆಯಲ್ಲಿದ್ದ ಪೇಯಿಂಟ್ ಮಿಕ್ಸ್ ಮಾಡಲು ಬಳಸುವ ಟಿನ್ನರ್ ಅನ್ನು ಕುಡಿಯುವ ನೀರು ಎಂದು ತಪ್ಪಾಗಿ ಭಾವಿಸಿ ಕುಡಿದಿದ್ದಾಳೆ.
ಟಿನ್ನರ್ ಕುಡಿದ ತಕ್ಷಣ ಬಾಲಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಳು. ಕೂಡಲೇ ಆಕೆಯನ್ನು ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಗೆ (Indira Gandhi Hospital, Bengaluru) ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಬಾಲಕಿ, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.
ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ (Mulbagal Rural Police Station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೋಷಕರ ಅಜಾಗರೂಕತೆಯಿಂದ ಪುಟ್ಟ ಜೀವವೊಂದು ಬಲಿಯಾದಂತಾಗಿದೆ.






