ಬೆಂಗಳೂರು: ಕಿಚ್ಚ ಸುದೀಪ್ (Kiccha Sudeep) ಮತ್ತು ದರ್ಶನ್ (Darshan) ಅಭಿಮಾನಿಗಳ ನಡುವೆ ನಡೆಯುತ್ತಿದ್ದ ಜಗಳಕ್ಕೆ ಈಗ ನಟರ ಆಪ್ತರು ಸಾಥ್ ನೀಡುತ್ತಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಕೌಂಟರ್-ಎನ್‌ಕೌಂಟರ್ ಸರಣಿ ಮುಂದುವರೆದಿದೆ.
ಘಟನೆಯ ಹಿನ್ನೆಲೆ :
ದರ್ಶನ್ ಅವರ ಪರಮಾಪ್ತ ನಟ ಧನ್ವೀರ್ ಗೌಡ (Dhanveerah) ಇತ್ತೀಚೆಗೆ ದರ್ಶನ್ ಫೋಟೋ ಹಾಕಿ, “ಕಾಡಿನಲ್ಲಿ ಎಲ್ಲಾ ಪ್ರಾಣಿಗಳು ಇರುತ್ತವೆ, ಆದರೆ ಸಿಂಹನೇ ರಾಜ” ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ಸುದೀಪ್ ಆಪ್ತ ವಿನಯ್ ಗೌಡ (Vinay Gowda) ತಿರುಗೇಟು ನೀಡಿ, “ಹೌದು ಸಿಂಹನೇ ರಾಜ.. ಆ ಸಿಂಹ ಕಿಚ್ಚ ಸುದೀಪ್” ಎಂದು ವೀಡಿಯೋ ಹಂಚಿಕೊಂಡಿದ್ದರು.
ವಿನಯ್ ಗೌಡ ಅವರ ‘ಸಿಂಹ’ ಪೋಸ್ಟ್‌ಗೆ ನಟ ಧನ್ವೀರ್ ಈಗ ಅನಿರೀಕ್ಷಿತ ಮತ್ತು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ದರ್ಶನ್ ಅಭಿನಯದ ‘ಡೆವಿಲ್’ (Devil) ಸಿನಿಮಾದಲ್ಲಿ ವಿನಯ್ ಗೌಡ ಕೂಡ ನಟಿಸಿದ್ದಾರೆ. ಇದೀಗ ಧನ್ವೀರ್ ಅದೇ ಸಿನಿಮಾದ ಒಂದು ದೃಶ್ಯವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ದರ್ಶನ್ ಅವರು ವಿನಯ್ ಗೌಡ ಅವರಿಗೆ ಎಚ್ಚರಿಕೆ ನೀಡುವ (ಹೆದರಿಸುವ) ಸೀನ್ ಇದೆ. ಇದು ನೇರವಾಗಿ ವಿನಯ್‌ಗೆ ನೀಡಿದ ಟಾಂಗ್ ಎನ್ನಲಾಗುತ್ತಿದೆ.
ಇದರ ಜೊತೆಗೆ ‘ಲಯನ್ ಕಿಂಗ್’ ಸಿನೆಮಾದ ದೃಶ್ಯವನ್ನೂ ಬಳಸಿಕೊಂಡು, ಅಸಲಿ ರಾಜ ಯಾರು ಎಂಬ ಸಂದೇಶ ರವಾನಿಸಿದ್ದಾರೆ.
ವಿನಯ್ ಗೌಡ ಅವರು ‘ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದರೂ ಅದರ ಪ್ರಚಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದು ಚಿತ್ರತಂಡ ಮತ್ತು ವಿನಯ್ ನಡುವಿನ ಅಸಮಾಧಾನಕ್ಕೆ ಕಾರಣವಾಗಿತ್ತು. ಈಗ ಸುದೀಪ್ ಬೆಂಬಲಕ್ಕೆ ನಿಂತಿರುವ ವಿನಯ್ ವಿರುದ್ಧ ದರ್ಶನ್ ಬಣ ರೊಚ್ಚಿಗೆದ್ದಿದೆ.






