ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಸುದೀಪ್ (Kiccha Sudeep) ಮತ್ತು ದರ್ಶನ್ (Darshan) ಅಭಿಮಾನಿಗಳ ನಡುವೆ ನಡೆಯುತ್ತಿರುವ ಪೋಸ್ಟ್ ವಾರ್ ಬಗ್ಗೆ ನಟಿ ರಕ್ಷಿತಾ ಪ್ರೇಮ್ (Rakshitha Prem) ಮೌನ ಮುರಿದಿದ್ದಾರೆ. ಇಬ್ಬರು ನಟರ ಜೊತೆ ಉತ್ತಮ ಒಡನಾಟ ಹೊಂದಿರುವ ರಕ್ಷಿತಾ, “ಇಬ್ಬರ ನಡುವೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ದರ್ಶನ್ ಮತ್ತು ಸುದೀಪ್ ಇಬ್ಬರನ್ನೂ ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವರ ನಡುವೆ ಅಂಥದ್ದೇನು ದೊಡ್ಡ ವೈರತ್ವವಿಲ್ಲ. ಅಭಿಮಾನಿಗಳ ಹೆಸರಲ್ಲಿ ಕೆಲವರು ದ್ವೇಷ ಹುಟ್ಟುಹಾಕುತ್ತಿದ್ದಾರೆ.
ದರ್ಶನ್ ಅಭಿನಯದ ‘ಕಾಟೇರ’ (Kaatera) ಸಿನಿಮಾ ಬಿಡುಗಡೆಯಾದಾಗ ಸುದೀಪ್ ಅವರು ತಮ್ಮ ಮನೆಯಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಆ ಚಿತ್ರದಲ್ಲಿ ದರ್ಶನ್ ನಟನೆಯನ್ನು ನೋಡಿ ಸುದೀಪ್ ತುಂಬಾ ಮೆಚ್ಚಿ ಮಾತನಾಡಿದ್ದರು ಎಂಬ ಗುಟ್ಟನ್ನು ರಕ್ಷಿತಾ ಬಿಚ್ಚಿಟ್ಟಿದ್ದಾರೆ.
ಅದೇ ರೀತಿ ದರ್ಶನ್ ಕೂಡ ಸುದೀಪ್ ಬಗ್ಗೆ ಯಾವತ್ತೂ ಕೆಟ್ಟದಾಗಿ ಮಾತನಾಡಿಲ್ಲ, ಯಾವಾಗಲೂ ಒಳ್ಳೆಯದನ್ನೇ ಹೇಳುತ್ತಿದ್ದರು. ಇತ್ತೀಚೆಗೆ ಸುದೀಪ್ ನೀಡಿದ ಹೇಳಿಕೆ ‘ಪೈರಸಿ’ ಹಾವಳಿಯ ಬಗ್ಗೆ ಇತ್ತೇ ಹೊರತು ಅದು ದರ್ಶನ್ ವಿರುದ್ಧವಲ್ಲ. ಇದನ್ನು ವೈಯಕ್ತಿಕ ದ್ವೇಷಕ್ಕೆ ತಿರುಗಿಸುವುದು ಬೇಡ ಎಂದು ಮಾಧ್ಯವದರ ಮುಂದೆ ಹೇಳಿದರು.






