ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ನಡೆದ ಭೀಕರ ಸೀಬರ್ಡ್ ಬಸ್ (Seabird Bus) ಅಪಘಾತದಲ್ಲಿ ಮೃತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಮೃತರಲ್ಲಿ ಐವರು ಬಸ್ ಪ್ರಯಾಣಿಕರಾಗಿದ್ದರೆ, ಮತ್ತೊಬ್ಬರು ಟ್ಯಾಂಕರ್ ಚಾಲಕ ಎಂದು ಗುರುತಿಸಲಾಗಿದೆ.
ದುರಂತದಲ್ಲಿ ಚನ್ನರಾಯಪಟ್ಟಣ ಮೂಲದ ಮಾನಸ, ಬಟ್ಕಳದ ಡೆಲಾಯ್ಟ್ ಉದ್ಯೋಗಿ ರಶ್ಮಿ ಮಹಾಲೆ, ನವ್ಯಾ, ಬಿಂದು ಮತ್ತು 8 ವರ್ಷದ ಮಗಳು ಗ್ರೇಯಾ ಮತ್ತು ಹರಿಯಾಣ ಮೂಲದ ಲಾರಿ ಚಾಲಕ ಕುಲದೀಪ್ ಮೃತಪಟ್ಟಿದ್ದಾರೆ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಂಜೀತ್ ಬಂಡಾರು ಸ್ಪಷ್ಟಪಡಿಸಿದ್ದಾರೆ.
ಪ್ರಯಾಣಿಕರ ಲೆಕ್ಕಾಚಾರ (Passenger Statistics):
ಒಟ್ಟು 28 ಜನರು ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ್ದರು. ಇಬ್ಬರು ಪ್ರಯಾಣಿಕರು ಮಾರ್ಗಮಧ್ಯೆ ಬಸ್ ಹತ್ತಿದ್ದರು. ಬಸ್ಸಿನಲ್ಲಿ ಒಟ್ಟು 30 ಪ್ರಯಾಣಿಕರಿದ್ದರು. (ಒಬ್ಬರು ಟಿಕೆಟ್ ಬುಕ್ ಮಾಡಿದ್ದರೂ ಪ್ರಯಾಣಿಸಿರಲಿಲ್ಲ. ಡ್ರೈವರ್ ಮತ್ತು ಕ್ಲೀನರ್ ಸೇರಿದಂತೆ ಬಸ್ಸಿನಲ್ಲಿದ್ದವರ ಒಟ್ಟು ಸಂಖ್ಯೆ 34 ಜನ ಪ್ರಯಾಣ ಮಾಡುತ್ತಿದ್ದರು.






