ಗೌರಿಬಿದನೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಾಲಗಾನಹಳ್ಳಿ ಪೋಸ್ಟ್ ಆಫೀಸ್‌ನಲ್ಲಿ (Post Office) ಭಾರಿ ಹಣಕಾಸು ಅವ್ಯವಹಾರ ಬೆಳಕಿಗೆ ಬಂದಿದೆ. ಸಾರ್ವಜನಿಕರು ನಂಬಿಕೆಯಿಂದ ಇಟ್ಟಿದ್ದ ಸುಮಾರು ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಪೋಸ್ಟ್ ಮಾಸ್ಟರ್ ರಮ್ಯ (Post Master Ramya ) ಎಂಬುವವರು ದೋಖಾ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹಾಲಗಾನಹಳ್ಳಿ ಪೋಸ್ಟ್ ಆಫೀಸ್‌ನ ಅಧಿಕಾರಿಯಾಗಿರುವ ರಮ್ಯ ಎಂಬುವವರು ಈ ಅವ್ಯವಹಾರದ ಕಿಂಗ್‌ಪಿನ್ ಎನ್ನಲಾಗಿದೆ. ಜನರು ತಮ್ಮ ಉಳಿತಾಯ ಖಾತೆಗಳಲ್ಲಿ ಇಟ್ಟಿದ್ದ ಹಣ ಈಗ ಕಾಣೆಯಾಗಿದೆ. ಸುಮಾರು 200ಕ್ಕೂ ಹೆಚ್ಚು ಅಕೌಂಟ್‌ಗಳಲ್ಲಿನ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ.
ಸಾರ್ವಜನಿಕರಿಂದ ಹಣ ಪಡೆದು ಅವರ ಖಾತೆಗಳಿಗೆ ಜಮೆ ಮಾಡದೆ, ತಾನೇ ಆ ಹಣವನ್ನು ಗುಳುಂ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಣ ಕಳೆದುಕೊಂಡ ಜನರು ದಿಕ್ಕುಗಾಣದೆ ಹೈರಾಣಾಗಿದ್ದಾರೆ. ಇಂದು ಪೋಸ್ಟ್ ಆಫೀಸ್‌ಗೆ ಬೀಗ ಜಡಿದು ಸಾರ್ವಜನಿಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.
ತಮ್ಮ ಬೆವರಿನ ಹಣವನ್ನು ವಾಪಸ್ ಕೊಡಿಸುವಂತೆ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಜನರು ಮನವಿ ಮಾಡಿದ್ದಾರೆ. ಆರೋಪಿ ರಮ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಪ್ರತಿಯೊಬ್ಬರಿಗೂ ಅವರ ಹಣ ತಲುಪಬೇಕು ಎಂದು ಆಗ್ರಹಿಸಿದ್ದಾರೆ.






