Home State Politics National More
STATE NEWS

New Year Special | ಹೊಸ ವರ್ಷದ ಪ್ರಯುಕ್ತ ಜನವರಿ 1ರ ಮುಂಜಾನೆ 2 ಗಂಟೆಯವರೆಗೆ ಮೆಟ್ರೋ ಸೇವೆ ವಿಸ್ತರಣೆ!

Namma Metro's Purple Line (1)
Posted By: Meghana Gowda
Updated on: Dec 29, 2025 | 12:48 PM

ಬೆಂಗಳೂರು: ಸಿಲಿಕಾನ್ ಸಿಟಿಯ ಹೊಸ ವರ್ಷದ ಸಂಭ್ರಮಾಚರಣೆಗೆ ಮೆರುಗನ್ನು ನೀಡಲು ಸಾರಿಗೆ ವ್ಯವಸ್ಥೆಯ ಜೀವನಾಡಿಯಾಗಿರುವ ನಮ್ಮ ಮೆಟ್ರೋ (Namma Metro)  ತನ್ನ ಸೇವಾ ಸಮಯವನ್ನು ವಿಸ್ತರಿಸಿದೆ. 2025ರ ಡಿಸೆಂಬರ್ 31ರ ಮಧ್ಯರಾತ್ರಿ ಮತ್ತು 2026ರ ಜನವರಿ 1ರ ಮುಂಜಾನೆಯವರೆಗೆ ಮೆಟ್ರೋ ರೈಲುಗಳು ಕಾರ್ಯನಿರ್ವಹಿಸಲಿವೆ.

ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲುಗಳು ಜ. 1ರ ಮುಂಜಾನೆ 2:00 ಗಂಟೆಗೆ ಹೊರಡಲಿವೆ. ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ (Majestic) ನಾಲ್ಕೂ ದಿಕ್ಕುಗಳಿಗೆ ಹೊರಡುವ ಕೊನೆಯ ರೈಲುಗಳು ರಾತ್ರಿ 2:40 ಅಥವಾ 2:45ಕ್ಕೆ ಲಭ್ಯವಿರುತ್ತವೆ.

ಮಾರ್ಗವಾರು ವಿವರಗಳು 

ಮಾರ್ಗ (Line) ಇಂದ (From) → ಗೆ (To) ಕೊನೆಯ ರೈಲು (Last Train)
ನೇರಳೆ ಮಾರ್ಗ (Purple) ಬೈಯಪ್ಪನಹಳ್ಳಿ → ಕೆಂಗೇರಿ / ಚಲ್ಲಘಟ್ಟ ರಾತ್ರಿ 1:45 – 2:00
ಹಸಿರು ಮಾರ್ಗ (Green) ಮಜೇಸ್ಟಿಕ್ → ನಾಗಸಂದ್ರ / ರೇಷ್ಮೆ ಸಂಸ್ಥೆ ರಾತ್ರಿ 2:00
ಹಳದಿ ಮಾರ್ಗ (Yellow) ಆರ್‌ವಿ ರಸ್ತೆ → ಬೊಮ್ಮಸಂದ್ರ ರಾತ್ರಿ 3:10 ರವರೆಗೆ ವಿಶೇಷ ಸೇವೆ
ಹಳದಿ ಮಾರ್ಗ (Yellow) ಬೊಮ್ಮಸಂದ್ರ → ಆರ್‌ವಿ ರಸ್ತೆ ರಾತ್ರಿ 1:30

ಪ್ರಯಾಣಿಕರ ಗಮನಕ್ಕೆ ಪ್ರಮುಖ ಸೂಚನೆಗಳು:

ಎಂ.ಜಿ. ರಸ್ತೆ ನಿಲ್ದಾಣ ಬಂದ್: ಜನದಟ್ಟಣೆ ನಿಯಂತ್ರಿಸಲು ಡಿಸೆಂಬರ್ 31ರ ರಾತ್ರಿ 11 ಗಂಟೆಯ ನಂತರ ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ಬಂದ್ ಮಾಡಲಾಗುತ್ತದೆ. ಎಂ.ಜಿ. ರಸ್ತೆಯಲ್ಲಿ ಸಂಭ್ರಮಾಚರಣೆ ಮುಗಿಸಿ ಹಿಂತಿರುಗುವವರು ಟ್ರಿನಿಟಿ (Trinity) ಅಥವಾ ಕಬ್ಬನ್ ಪಾರ್ಕ್ (Cubbon Park) ನಿಲ್ದಾಣಗಳನ್ನು ಬಳಸಬೇಕೆಂದು ಸೂಚಿಸಲಾಗಿದೆ.

ಟೋಕನ್ ಕ್ಯೂ ತಪ್ಪಿಸಲು 50 ರೂಪಾಯಿ ಮೌಲ್ಯದ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಸೌಲಭ್ಯವಿದ್ದು, ಇದನ್ನು ಡಿ. 31ರ ಬೆಳಿಗ್ಗೆಯಿಂದಲೇ ಖರೀದಿಸಬಹುದು ಎಂದು ತಿಳಿಸಿದೆ.

Shorts Shorts