ಕಲಬುರಗಿ: ನಗರದ ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ನೆರೆಮನೆಯ ಯುವಕನಿಂದ ಅತ್ಯಾಚಾರ(Rape)ಕ್ಕೊಳಗಾದ ಯುವತಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆಗೆ (Suicide) ಯತ್ನಿಸಿದ್ದಾಳೆ.
ಆರೋಪಿ ವಿನೋದ್ ರಾಠೋಡ್ ಎಂದು. ಈತ ಸಂತ್ರಸ್ತ ಯುವತಿ ಅಕ್ಕಪಕ್ಕದ ಮನೆಯವನು. ವಿನೋದ್ ಜೊತೆಗೆ ಸಲುಗೆಯಿಂದ ಇದ್ದ ಯುವತಿಯನ್ನು ಆತ ಲಾಡ್ಜ್‌ಗೆ ಕರೆದೊಯ್ದಿದ್ದನು. ಅಲ್ಲಿ ಯುವತಿಗೆ ಅಮಲು ಬರುವ ಔಷಧಿ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆಯಿಂದ ಮನನೊಂದ ಯುವತಿ ಮನೆಗೆ ಬಂದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಆಕೆಯನ್ನು ಕುಟುಂಬಸ್ಥರು ಕಲಬುರಗಿಯ ಜಿಮ್ಸ್ (GIMS Hospital) ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ತನಿಖೆಯ ವೇಳೆ, ಆತ್ಮಹತ್ಯೆಗೆ ಯತ್ನಿಸಲು ವಿನೋದ್ ರಾಠೋಡ್ ನಡೆಸಿದ ಅತ್ಯಾಚಾರವೇ ಕಾರಣ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ.
ಸಂತ್ರಸ್ತೆಯ ಹೇಳಿಕೆ ಆಧರಿಸಿ ಆರೋಪಿಯ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ರೇಪ್ ಕೇಸ್ ದಾಖಲಾಗಿದೆ.






