ಬೆಂಗಳೂರು: ಹೊಸ ವರ್ಷಾಚರಣೆಯ ಕೇಂದ್ರಬಿಂದುವಾಗಿರುವ ಎಂಜಿ ರೋಡ್ (MG Road) ಮತ್ತು ಬ್ರಿಗೇಡ್ ರೋಡ್ (Brigade Road) ಸೇರಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ನೆರವಾಗಲು ಪೊಲೀಸರು ಈ ಬಾರಿ QR ಕೋಡ್ (QR Code) ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಹೆಚ್ಚು ಜನ ಸೇರುವ ಕಡೆಗಳಲ್ಲಿ ಈ ಕೋಡ್‌ಗಳನ್ನು ಅಂಟಿಸಲಾಗಿದ್ದು, ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದರೆ ಸಾಕು, ಎಲ್ಲಾ ಮಾಹಿತಿ ನಿಮ್ಮ ಬೆರಳ ತುದಿಯಲ್ಲಿ ಲಭ್ಯವಾಗಲಿದೆ.
QR ಕೋಡ್ ಸ್ಕ್ಯಾನ್ ಮಾಡಿದರೆ ಸಿಗುವ ಮಾಹಿತಿಗಳು
ಪೊಲೀಸರು ಸಿದ್ಧಪಡಿಸಿರುವ ಈ ವಿಶೇಷ QR ಕೋಡ್ ಸ್ಕ್ಯಾನ್ ಮಾಡಿದರೆ ಈ ಕೆಳಗಿನ ಪ್ರಮುಖ ಅಪ್‌ಡೇಟ್‌ಗಳು ಸಿಗಲಿವೆ:
-
ಇವೆಂಟ್ ಲೊಕೇಷನ್ (Event Location): ಎಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ ಎಂಬ ನಿಖರ ಮಾಹಿತಿ.
-
ಸೇಫ್ಟಿ ಅಡ್ವೈಸರಿ (Safety Advisory): ಸುರಕ್ಷತೆಗೆ ಸಂಬಂಧಿಸಿದ ಮಾರ್ಗಸೂಚಿಗಳು.
-
ಲೈವ್ ಅಪ್‌ಡೇಟ್ (Live Updates): ಆ ಕ್ಷಣದ ಟ್ರಾಫಿಕ್ ಮತ್ತು ಜನರ ದಟ್ಟಣೆಯ ಮಾಹಿತಿ.
-
ಅವೇರ್ನೆಸ್ ವಿಡಿಯೋ (Awareness Videos): ಜನಜಾಗೃತಿ ಮೂಡಿಸುವ ವಿಡಿಯೋಗಳು.
ತುರ್ತು ಚಿಕಿತ್ಸೆಗೆ 14 ಕಡೆಗಳಲ್ಲಿ ‘ಹೆಲ್ತ್ ಡೆಸ್ಕ್’:
ಜನದಟ್ಟಣೆ ಹೆಚ್ಚಿರುವ ಕಡೆಗಳಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಎದುರಾದರೆ ತಕ್ಷಣ ಸ್ಪಂದಿಸಲು ನಗರದ ಪ್ರಮುಖ 14 ಸ್ಥಳಗಳಲ್ಲಿ ಹೆಲ್ತ್ ಡೆಸ್ಕ್‌ಗಳನ್ನು ಸ್ಥಾಪಿಸಲಾಗಿದೆ:
ಬೆರ್ರಿ ಸರ್ಕಲ್, ಚರ್ಚ್ ಸ್ಟ್ರೀಟ್ ಮೆಟ್ರೋ ಸ್ಟೇಷನ್, ಎಂಜಿ ರೋಡ್ ಬರ್ಟನ್ ಸೆಂಟರ್, SBI ಸರ್ಕಲ್ ಟ್ರಾಫಿಕ್ ಪಾರ್ಕ್, ಯುಬಿ ಸಿಟಿ ಸಮೀಪ, ಮ್ಯೂಸಿಯಂ ರೋಡ್ ಜಿಪಿಓ ಸಮೀಪ. ಬ್ರಿಗೇಡ್ ರೋಡ್ RHP ಜಂಕ್ಷನ್, ಕಾವೇರಿ ಎಂಪೋರಿಯಂ ಜಂಕ್ಷನ್, ಮೋಟೋ ರಾಯಲ್ ಅರ್ಕೇಡ್ ಸಮೀಪ. ಹಾಗೂ ಒಪೆರಾ ಹೌಸ್, ವಾರ್ ಮೆಮೋರಿಯಲ್, ಓಪೆರಾ ಸರ್ಕಲ್, ಗರುಡಾ ಮಾಲ್ ಜಂಕ್ಷನ್ ಹಾಗೂ ಫೈರ್ ಸ್ಟೇಷನ್ ಎದುರು.






