ಮಂಗಳೂರು: ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರುವ ನೆಪದಲ್ಲಿ ಸೈಬರ್ ವಂಚಕರು (Cyber Fraudsters) ಆಕರ್ಷಕ ಲಿಂಕ್‌ಗಳನ್ನು ಕಳುಹಿಸಿ ವಂಚಿಸುತ್ತಿದ್ದಾರೆ. ಮಂಗಳೂರಿನ ಖ್ಯಾತ ಸೈಬರ್ ತಜ್ಞ ಡಾ. ಅನಂತ ಪ್ರಭು ಅವರು ಈ ಕುರಿತು ಸಾರ್ವಜನಿಕರಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ.
ಉಚಿತ ಗಿಫ್ಟ್ ವೋಚರ್ (Free Gift Vouchers), ನ್ಯೂ ಇಯರ್ ಲಕ್ಕಿ ಡ್ರಾ (Lucky Draw), ಅಥವಾ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ‘ಸ್ಪೆಷಲ್ ಆಫರ್’ ಎಂದು ಲಿಂಕ್ ಕಳುಹಿಸಲಾಗುತ್ತದೆ. ಈ ಲಿಂಕ್‌ಗಳನ್ನು ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಮೊಬೈಲ್‌ಗೆ ಮಾಲ್‌ವೇರ್‌ಗಳು (Malware) ನುಸುಳಿ, ನಿಮ್ಮ ಬ್ಯಾಂಕ್ ಖಾತೆ ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತವೆ.
ಇದೀಗ ಡೀಪ್ ಫೇಕ್ (Deepfake) ವಿಡಿಯೋ ಮತ್ತು ಫೋಟೋಗಳ ಮೂಲಕವೂ ನೈಜತೆಯ ಭ್ರಮೆ ಹುಟ್ಟಿಸಿ ವಂಚಿಸಲು ಪ್ಲಾನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹೀಗಾಗಿ ಅಪರಿಚಿತರಿಂದ ಬರುವ ಯಾವುದೇ ಗಿಫ್ಟ್ ಲಿಂಕ್ ಅಥವಾ ಶುಭಾಶಯದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಬ್ಯಾಂಕ್ ವಿವರ, ಯುಪಿಐ ಪಿನ್ (UPI PIN) ಅಥವಾ ಒಟಿಪಿ (OTP) ಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಲಾಟರಿ ಅಥವಾ ಉಚಿತ ಕೊಡುಗೆಗಳ ಮೆಸೇಜ್ ಕಂಡರೆ ತಕ್ಷಣ ಡಿಲೀಟ್ ಮಾಡಿ. ಹಾಗೂ ನಿಮ್ಮ ಮೊಬೈಲ್‌ನಲ್ಲಿ ಅಧಿಕೃತ ಆ್ಯಂಟಿ ವೈರಸ್ ಸಾಫ್ಟ್‌ವೇರ್ ಅಳವಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.






