Home State Politics National More
STATE NEWS

Bhatkal ಪೊಲೀಸರ ಭರ್ಜರಿ ಬೇಟೆ: 1.38 ಲಕ್ಷ ಮೌಲ್ಯದ ನಿಷೇಧಿತ E-Cigarette ಜಪ್ತಿ; ವ್ಯಾಪಾರಿ ಅಂದರ್!

Bhatkal police raid dubai market banned e cigarett
Posted By: Sagaradventure
Updated on: Jan 2, 2026 | 5:18 PM

ಭಟ್ಕಳ(ಉತ್ತರ ಕನ್ನಡ): ಭಟ್ಕಳ ಶಹರ ಠಾಣೆ ಪೊಲೀಸರು ಹೊಸ ವರ್ಷದ ದಿನವೇ (ಜ.1) ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ನಗರದ ಜನನಿಬಿಡ ಪ್ರದೇಶವಾದ ಹೂವಿನ ಚೌಕ ಸಮೀಪದ ದುಬೈ ಮಾರ್ಕೆಟ್‌ನ ಅಂಗಡಿಯೊಂದರ ಮೇಲೆ ರಾತ್ರಿ ಹಠಾತ್ ದಾಳಿ ನಡೆಸಿ, ಲಕ್ಷಾಂತರ ರೂಪಾಯಿ ಮೌಲ್ಯದ ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ ಹಾಗೂ ನಿಕೋಟಿನ್ ವೇಪ್‌ಗಳನ್ನು (Vapes) ವಶಪಡಿಸಿಕೊಂಡಿದ್ದಾರೆ.

ಜನವರಿ 1 ರಂದು ರಾತ್ರಿ 10:30ರ ಸುಮಾರಿಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದಾರೆ. ಆರೋಪಿಯನ್ನು ಕಾರಗದ್ದೆ 2ನೇ ಕ್ರಾಸ್ ನಿವಾಸಿ, 58 ವರ್ಷದ ಸಿದ್ದಿಕ್ ಅಬ್ದುಲ್ ರೆಹಮಾನ್ ಅಲಿಯಾಸ್ ಮಸ್ತಾನ್ ಎಂದು ಗುರುತಿಸಲಾಗಿದೆ. ಈತ ತನ್ನ ಅಂಗಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಕಾನೂನುಬಾಹಿರವಾಗಿ ನಿಷೇಧಿತ ವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಏನೇನು ಜಪ್ತಿಯಾಗಿದೆ?: ದಾಳಿಯ ವೇಳೆ ಅಂಗಡಿಯಲ್ಲಿ ಬರೋಬ್ಬರಿ 76,000 ರೂಪಾಯಿ ಮೌಲ್ಯದ 38 ಎಲೆಕ್ಟ್ರಾನಿಕ್ ಸಿಗರೇಟ್‌ಗಳು ಮತ್ತು 62,500 ರೂಪಾಯಿ ಮೌಲ್ಯದ 125 ನಿಕೋಟಿನ್ ಲಿಕ್ವಿಡ್ ರೀಫಿಲ್ ಅಥವಾ ವೇಪ್‌ಗಳು (Vapes) ಪತ್ತೆಯಾಗಿವೆ. ಒಟ್ಟು 1,38,500 ರೂಪಾಯಿ ಮೌಲ್ಯದ ಮಾಲನ್ನು ಪೊಲೀಸರು ಸ್ಥಳದಲ್ಲೇ ಜಪ್ತಿ ಮಾಡಿಕೊಂಡಿದ್ದಾರೆ.

ಆರೋಪಿಯ ವಿರುದ್ಧ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ-2019ರ (Prohibition of Electronic Cigarettes Act-2019) ಸೆಕ್ಷನ್ 7 ಮತ್ತು 8ರ ಅಡಿಯಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಸಂಖ್ಯೆ 01/2026) ದಾಖಲಿಸಿ, ಆರೋಪಿಯನ್ನು ಬಂಧಿಸಲಾಗಿದೆ.

ಭಟ್ಕಳ ಡಿವೈಎಸ್‌ಪಿ ಮಹೇಶ್ ಎಂ.ಕೆ ಅವರ ಮಾರ್ಗದರ್ಶನದಲ್ಲಿ, ಸಿಪಿಐ ದಿವಾಕರ್ ಪಿ.ಎಂ ಅವರ ನೇತೃತ್ವದಲ್ಲಿ ಈ ಯಶಸ್ವಿ ದಾಳಿ ನಡೆದಿದೆ. ಪಿಎಸ್‌ಐ ನವೀನ್ ನಾಯ್ಕ್ ಮತ್ತು ಸಿಬ್ಬಂದಿಗಳಾದ ಉದಯ್ ನಾಯ್ಕ್, ದೀಪಕ್ ನಾಯ್ಕ್, ಮಹಾಂತೇಶ್ ಹಿರೇಮಠ, ಕಾಶಿನಾಥ್ ಕೊಟಗೊಣಸಿ, ಸುರೇಶ್ ಮರಾಠಿ, ಜಗದೀಶ್ ನಾಯ್ಕ್ ಮತ್ತು ರೇವಣಸಿದ್ದಪ್ಪ ಮಾಗಿ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Shorts Shorts