ಬೆಂಗಳೂರು: ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಯುವಜನತೆಗೆ ಅಂಚೆ ಇಲಾಖೆಯು ಹೊಸ ವರ್ಷದ ಉಡುಗೊರೆ ನೀಡಲು ಮುಂದಾಗಿದೆ. ದೇಶಾದ್ಯಂತ ಇರುವ ವಿವಿಧ ಅಂಚೆ ವಲಯಗಳಲ್ಲಿ ಖಾಲಿ ಇರುವ ಸುಮಾರು 30,000ಕ್ಕೂ ಅಧಿಕ ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಆರಂಭವಾಗುತ್ತಿದೆ.
ಅಧಿಕೃತ ಮೂಲಗಳ ಪ್ರಕಾರ, ಜನವರಿ 15, 2026 ರಂದು ನೇಮಕಾತಿಯ ಸಂಪೂರ್ಣ ಅಧಿಸೂಚನೆ ಹೊರಬೀಳುವ ಸಾಧ್ಯತೆಯಿದೆ.
ಹುದ್ದೆಗಳ ಹೆಸರು: ಶಾಖಾ ಪೋಸ್ಟ್‌ಮಾಸ್ಟರ್ (BPM), ಸಹಾಯಕ ಶಾಖಾ ಪೋಸ್ಟ್‌ಮಾಸ್ಟರ್ (ABPM) ಹಾಗೂ ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳಿಗೆ ನೇಮಕತಿ ನಡೆಯಲಿದೆ. ಇದರಲ್ಲಿ ಒಟ್ಟು 30,000 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದುತಿಳಿದು ಬಂದಿದೆ.
ಅಭ್ಯರ್ಥಿಗಳ ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆ:
ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷಗಳ ಒಳಗಿರಬೇಕು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ. ಈ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ. ಬದಲಾಗಿ 10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ (Merit List) ಸಿದ್ಧಪಡಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಅಧಿಸೂಚನೆ ಬಿಡುಗಡೆ ಬಳಿಕ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮೊದಲು indiapostgdsonline.gov.in ವೆಬ್‌ಸೈಟ್ ಗೆ ಭೇಟಿ ನೀಡಬೇಕು. ಅಗತ್ಯ ದಾಖಲೆಗಳ ಸಹಿತ ಶೈಕ್ಷಣಿಕ ಅರ್ಹತೆ, ಜಾತಿ ಪ್ರಮಾಣಪತ್ರ, ಭಾವಚಿತ್ರ ಸೇರಿದಂತೆ ಮೊಬೈಲ್ ಸಂಖ್ಯೆ ಸಹಿತ ನೋಂದಾಯಿಸಿಕೊಳ್ಳಬೇಕು.
ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 100 ರೂ. ಇರುತ್ತದೆ. ಎಸ್‌ಸಿ/ಎಸ್‌ಟಿ, ಅಂಗವಿಕಲರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.






