ಬೆಂಗಳೂರು: ಜಾಗತಿಕ ಕ್ರೀಡಾಕೂಟಗಳಲ್ಲಿ ಸದ್ದು ಮಾಡುತ್ತಿರುವ ಕರ್ನಾಟಕದ ನಂದಿನಿ (Nandini) ಬ್ರ್ಯಾಂಡ್, ಈಗ ಐಪಿಎಲ್ 2026ರಲ್ಲಿ (IPL 2026) ಕರ್ನಾಟಕದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಜೊತೆ ಕೈಜೋಡಿಸಲು ಆಸಕ್ತಿ ವ್ಯಕ್ತಪಡಿಸಿದೆ.
ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್ ತಂಡಗಳಾದ ಐರ್ಲೆಂಡ್, ಸ್ಕಾಟ್ಲೆಂಡ್ಗೆ ಪ್ರಾಯೋಜಕತ್ವ ನೀಡಿ ಗಮನ ಸೆಳೆದಿರುವ ಕೆಎಂಎಫ್, ಈಗ ತನ್ನದೇ ರಾಜ್ಯದ ಆರ್ ಸಿಬಿ ತಂಡಕ್ಕೆ ಸ್ಪಾನ್ಸರ್ ಮಾಡಲು ಉತ್ಸುಕವಾಗಿದೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಐಎಸ್ಎಲ್ (ISL) ತಂಡಗಳಿಗೂ ಪ್ರಾಯೋಜಕತ್ವವನ್ನು ನೀಡಿತ್ತು. ಈಗ ಐಪಿಎಲ್ ಮೂಲಕ ವಿಶ್ವದಾದ್ಯಂತ ಇರುವ ಕನ್ನಡಿಗರನ್ನು ಮತ್ತು ಕ್ರಿಕೆಟ್ ಅಭಿಮಾನಿಗಳನ್ನು ತಲುಪಲು ಈ ಯೋಜನೆ ರೂಪಿಸಿದೆ. ಸದ್ಯ ಈ ಕುರಿತಂತೆ ಕೆಎಂಎಫ್ ಅಧಿಕಾರಿಗಳು ಮತ್ತು ಆರ್ ಸಿಬಿ ಮ್ಯಾನೇಜ್‌ಮೆಂಟ್ ನಡುವೆ ಮಾತುಕತೆ ನಡೆಯುವ ಸಾಧ್ಯತೆಗಳಿದ್ದು, ಅಧಿಕೃತ ಪ್ರಕಟಣೆಯೊಂದು ಬರಬೇಕು.






