ಯಲ್ಲಾಪುರ: ಪಟ್ಟಣದಲ್ಲಿ ಹಿಂದೂ ಯುವತಿ ರಂಜಿತಾ ಅವರನ್ನು ನಡುರಸ್ತೆಯಲ್ಲಿ ಬರ್ಬರವಾಗಿ ಇರಿದು ಕೊ*ಲೆಗೈದು ಪರಾರಿಯಾಗಿದ್ದ ಆರೋಪಿ ರಫೀಕ್, ಪೊಲೀಸ್ ಬಂಧನದ ಭೀತಿಯಿಂದ ಆ*ತ್ಮಹ*ತ್ಯೆಗೆ ಶರಣಾಗಿದ್ದಾನೆ. ಭಾನುವಾರ ಬೆಳಿಗ್ಗೆ ಪೊಲೀಸರು ನಡೆಸಿದ ತೀವ್ರ ಶೋಧ ಕಾರ್ಯಾಚರಣೆಯ ವೇಳೆ, ಪಟ್ಟಣದ ಹೊರವಲಯದ ನಿಸರ್ಗ ಮನೆಯ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಆತನ ಮೃ*ತದೇ*ಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶನಿವಾರದಂದು ನಡೆದ ಈ ಭೀಕರ ಹ*ತ್ಯಾಕಾಂಡದ ನಂತರ ಜಿಲ್ಲಾ ಪೊಲೀಸರು ಆರೋಪಿ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಜಾಲ ಬೀಸಿದ್ದರು. ರಾತ್ರಿಯಿಡೀ ನಿರಂತರ ಕಾರ್ಯಾಚರಣೆ ನಡೆಸಲಾಗಿತ್ತು. ಅಂತಿಮವಾಗಿ ಇಂದು ಬೆಳಿಗ್ಗೆ ಕಾಡಿನ ಮಧ್ಯೆ ಆರೋಪಿ ಆ*ತ್ಮಹ*ತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ರಫೀಕ್, ರಂಜಿತಾ ಅವರಿಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ ಎನ್ನಲಾಗಿದ್ದು, ಆಕೆ ನಿರಾಕರಿಸಿದ ದ್ವೇಷಕ್ಕೆ ಶನಿವಾರ ಹಾಡಹಗಲೇ ಚಾಕುವಿನಿಂದ ಇರಿದು ಹ*ತ್ಯೆ ಮಾಡಿದ್ದನು.
ಇದನ್ನೂ ಓದಿ: 👉Crime Update ಮದುವೆಗೆ ಒಪ್ಪದ ವಿವಾಹಿತೆಯ ಕತ್ತು ಸೀ*ಳಿ ಪರಾರಿಯಾಗಿದ್ದ ಕ್ಲಾಸ್‌ಮೇಟ್ ಆ*ತ್ಮಹ*ತ್ಯೆ!
ಈ ಘಟನೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಭಾನುವಾರ ನೀಡಿದ್ದ ‘ಯಲ್ಲಾಪುರ ಬಂದ್’ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿವೆ. ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಬೃಹತ್ ಖಂಡನಾ ಸಭೆ ನಡೆಸಿ, ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.






