Home State Politics National More
STATE NEWS

Century Gowda Passes Away | ತಿಥಿ ಸಿನಿಮಾ ಖ್ಯಾತಿಯ ಸೆಂಚುರಿ ಗೌಡ ನಿಧನ

Century Gowda
Posted By: Meghana Gowda
Updated on: Jan 5, 2026 | 4:07 AM

ಮಂಡ್ಯ : ಕನ್ನಡ ಚಿತ್ರರಂಗದ ವಿಶಿಷ್ಟ ಪ್ರೇಕ್ಷಕ ವರ್ಗವನ್ನು ತನ್ನ ನೈಜ ಅಭಿನಯದಿಂದ ಸೆಳೆದಿದ್ದ ಮಂಡ್ಯದ ಪ್ರತಿಭೆ ಸಿಂಗ್ರೇಗೌಡ  (Singregowda) ಅವರು ಜನವರಿ 4, 2026 ರ ಭಾನುವಾರ ರಾತ್ರಿ ನಿಧನರಾಗಿದ್ದಾರೆ.

100 ವರ್ಷ ವಯಸ್ಸು ದಾಟಿದ್ದರೂ ತಮ್ಮ ಅದ್ಭುತ ಚೈತನ್ಯದ ಮೂಲಕ ಸಿನಿಪ್ರೇಮಿಗಳ ಮನಗೆದ್ದಿದ್ದ ಇವರು, ವಯೋಸಹಜ ಕಾಯಿಲೆಯಿಂದ ಮಂಡ್ಯ ಜಿಲ್ಲೆಯ ಪಾಂಡವಪುರ (Pandavapura) ತಾಲೂಕಿನ ತಮ್ಮ ಸ್ವಗ್ರಾಮ ಸಿಂಗ್ರೇಗೌಡನ ಕೊಪ್ಪಲಿನಲ್ಲಿ ಕೊನೆಯುಸಿರೆಳೆದಿದ್ದಾರೆ.

2015ರಲ್ಲಿ ಬಿಡುಗಡೆಯಾದ ರಾಮ್ ರೆಡ್ಡಿ ನಿರ್ದೇಶನದ ‘ತಿಥಿ'(Thithi) ಸಿನಿಮಾದಲ್ಲಿ 100 ವರ್ಷದ ಹಿರಿಯ ವ್ಯಕ್ತಿಯಾಗಿ ಇವರು ಅಭಿನಯಿಸಿದ್ದರು. ಅಂದಿನಿಂದ ಇವರ ಹೆಸರೇ ‘ಸೆಂಚುರಿ ಗೌಡ’ (Century Gowda) ಎಂದು ಪ್ರಸಿದ್ಧಿಯಾಯಿತು. ಈ ಚಿತ್ರವು ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಇದರಲ್ಲಿ ನಟಿಸಿದವರೆಲ್ಲರೂ ಮಂಡ್ಯ ಭಾಗದ ನೈಜ ಪ್ರತಿಭೆಗಳಾಗಿದ್ದರು.

ಇದೇ ಸಿನಿಮಾದಲ್ಲಿ ‘ಗಡ್ಡಪ್ಪ’ ಪಾತ್ರ ಮಾಡಿ ಜನಪ್ರಿಯರಾಗಿದ್ದ ಚೆನ್ನೇಗೌಡ ಅವರು ಕಳೆದ ನವೆಂಬರ್ 12, 2025 ರಂದು ನಿಧನರಾಗಿದ್ದರು. ಗಡ್ಡಪ್ಪನ ಅಗಲಿಕೆಯ ಕೇವಲ ಎರಡು ತಿಂಗಳ ಅವಧಿಯಲ್ಲೇ ಸೆಂಚುರಿ ಗೌಡರು ಸಹ ಇಹಲೋಕ ತ್ಯಜಿಸಿದ್ದು ಸಿನಿಪ್ರೇಮಿಗಳಲ್ಲಿ ವಿಷಾದ ಮೂಡಿಸಿದೆ.

ಇಂದು (ಜನವರಿ 5) ಅವರ ಸ್ವಗ್ರಾಮ ಸಿಂಗ್ರೇಗೌಡನ ಕೊಪ್ಪಲಿನಲ್ಲಿ ಅಂತಿಮ ಸಂಸ್ಕಾರ ಕಾರ್ಯಗಳು ನೆರವೇರಲಿವೆ.

Shorts Shorts