Home State Politics National More
STATE NEWS

2nd PUC Preparatory Exam | ಪರೀಕ್ಷೆಗೂ ಮೊದಲೇ ವಿದ್ಯಾರ್ಥಿಗಳ ವಾಟ್ಸಾಪ್‌ ಸೇರಿದ ‘ಗಣಿತ’ ಪತ್ರಿಕೆ.!

PUC
Posted By: Meghana Gowda
Updated on: Jan 6, 2026 | 5:32 AM

ಬೆಂಗಳೂರು: ರಾಜ್ಯದಲ್ಲಿ ಇಂದು ನಡೆಯುತ್ತಿರುವ ದ್ವಿತೀಯ ಪಿಯುಸಿ (2nd PUC) ಪೂರ್ವಭಾವಿ ಪರೀಕ್ಷೆಯ ಗಣಿತ (Mathematics) ವಿಷಯದ ಪ್ರಶ್ನೆ ಪತ್ರಿಕೆಯು ಪರೀಕ್ಷೆಗೂ ಒಂದು ದಿನ ಮುಂಚಿತವಾಗಿಯೇ ಸೋರಿಕೆಯಾಗಿದೆ. ಈ ಲೀಕ್‌ನಿಂದಾಗಿ ಇಡೀ ಪರೀಕ್ಷಾ ವ್ಯವಸ್ಥೆಯ ಪಾವಿತ್ರ್ಯತೆಗೆ ಧಕ್ಕೆ ಬಂದಿದೆ.

ಇಂದು ನಡೆಯಬೇಕಿದ್ದ 80 ಅಂಕಗಳ ಗಣಿತ ಪ್ರಶ್ನೆ ಪತ್ರಿಕೆಯು ನಿನ್ನೆಯೇ ವಿದ್ಯಾರ್ಥಿಗಳ ವಾಟ್ಸಾಪ್ (WhatsApp)  ಗ್ರೂಪ್‌ಗಳಲ್ಲಿ ಹರಿದಾಡಿದೆ. ಒಟ್ಟು 47 ಪ್ರಶ್ನೆಗಳನ್ನು ಹೊಂದಿರುವ ಈ ಅಧಿಕೃತ ಪ್ರಶ್ನೆ ಪತ್ರಿಕೆಯು ಪರೀಕ್ಷಾ ಕೇಂದ್ರಗಳಿಗೆ ತಲುಪುವ ಮೊದಲೇ ವಿದ್ಯಾರ್ಥಿಗಳ ಕೈ ಸೇರಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಎಲ್ಲೆಡೆ ಸುದ್ದಿಯಾಗಿದ್ದರೂ, ಪಿಯು ಪರೀಕ್ಷಾ ಮಂಡಳಿಯು ಅದೇ ಪ್ರಶ್ನೆ ಪತ್ರಿಕೆಯನ್ನು ಬಳಸಿ ಇಂದು ಪರೀಕ್ಷೆ ನಡೆಸುತ್ತಿದೆ.

ನೈಜವಾಗಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಈ ಸೋರಿಕೆಯಿಂದ ಅನ್ಯಾಯವಾಗುತ್ತಿದೆ. ಪರೀಕ್ಷಾ ಮಂಡಳಿಯ ಈ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಪೋಷಕರು ಮತ್ತು ಶಿಕ್ಷಣ ತಜ್ಞರು ಕಿಡಿಕಾರುತ್ತಿದ್ದಾರೆ.

Shorts Shorts