ಬೆಂಗಳೂರು: ಜನವರಿ ತಿಂಗಳಿನಿಂದ ಮಾರ್ಚ್‌ವರೆಗೆ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಇರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ತನ್ನ ಪ್ರಮುಖ ಪ್ರೀಮಿಯರ್ ಬಸ್‌ಗಳ (Premier buses) ದರವನ್ನು ಶೇ. 5 ರಿಂದ ಶೇ. 15 ರವರೆಗೆ ಕಡಿತಗೊಳಿಸಿದೆ. ಈ ರಿಯಾಯಿತಿಯು ಜನವರಿ 5 ರಿಂದಲೇ ಜಾರಿಗೆ ಬಂದಿದ್ದು, ಪ್ರವಾಸಿಗರಿಗೆ ಮತ್ತು ಕಚೇರಿ ಕೆಲಸಗಳಿಗಾಗಿ ಪ್ರಯಾಣಿಸುವವರಿಗೆ ಭಾರಿ ರಿಲೀಫ್ ನೀಡಿದೆ.
ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್, ಮಲ್ಟಿ ಆಕ್ಸಲ್ ಸ್ಲೀಪರ್ ಹಾಗೂ ವಿಮಾನ ನಿಲ್ದಾಣದ ಫ್ಲೈ ಬಸ್‌ಗಳಿಗೆ (Flybus) ರಿಯಾಯಿತಿ ಅನ್ವಯಿಸುತ್ತದೆ. ಬೆಂಗಳೂರಿನಿಂದ ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಮಡಿಕೇರಿ ಸೇರಿದಂತೆ ಅಂತರರಾಜ್ಯ ಮಾರ್ಗಗಳಾದ ಚೆನ್ನೈ, ಹೈದರಾಬಾದ್, ತಿರುಪತಿ ಮತ್ತು ಪುಣೆ ಮಾರ್ಗಗಳಲ್ಲಿ ದರ ಇಳಿಕೆಯಾಗಿದೆ.
ಪ್ರಮುಖ ನಗರಗಳ ಪರಿಷ್ಕೃತ ದರ ಪಟ್ಟಿ (New Fare List):
| ಮಾರ್ಗ (Route) | ಬಸ್ ಪ್ರಕಾರ (Bus Type) | ಹಳೆಯ ದರ (Old Fare) | ಹೊಸ ದರ (New Fare) |
| ಬೆಂಗಳೂರು – ದಾವಣಗೆರೆ | ಐರಾವತ ಕ್ಲಬ್ ಕ್ಲಾಸ್ | ₹ 770 | ₹ 675 |
| ಇವಿ ಪವರ್ ಪ್ಲಸ್ | ₹ 720 | ₹ 620 | |
| ಬೆಂಗಳೂರು – ಉಡುಪಿ | ಅಂಬಾರಿ ಉತ್ಸವ | ₹ 1620 | ₹ 1450 |
| ಐರಾವತ 2.0 | ₹ 1440 | ₹ 1260 | |
| ಬೆಂಗಳೂರು – ಮುರುಡೇಶ್ವರ | ಅಂಬಾರಿ ಉತ್ಸವ | ₹ 1900 | ₹ 1700 |
| ಬೆಂಗಳೂರು – ಮುಂಬೈ | ಪ್ರೀಮಿಯರ್ ಬಸ್ | ₹ 2500 | ₹ 2000 |
| ಬೆಂಗಳೂರು – ಪುಣೆ | ಪ್ರೀಮಿಯರ್ ಬಸ್ | ₹ 2300 | ₹ 1700 |






