ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Laxmi Hebbalkar) ಅವರ ಪುತ್ರ ಮೃಣಾಲ್ ಹೆಬ್ಬಾಳಕರ್ (Mrinal Hebbalkar) ಅವರ ಕಾರು ಚಾಲಕನ ಮೇಲೆ ಚೂರಿಯಿಂದ ಮನಬಂದಂತೆ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹಣಕಾಸಿನ ವಿಚಾರಕ್ಕೆ ನಡೆದ ಘಟನೆಯಲ್ಲಿ ಈ ಕೃತ್ಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ವಿವರ:
ಮೃಣಾಲ್ ಹೆಬ್ಬಾಳಕರ್ ಅವರ ನಂಬಿಕಸ್ತ ಚಾಲಕ ಬಸವಂತ ಕಡೋಲ್ಕರ್. ಈತ ತನ್ನ ಆಪ್ತ ಸ್ನೇಹಿತರಾದ ಬೋಜಗಾ ಗ್ರಾಮದ ಶಿವಯ್ಯಾ ಮತ್ತು ನಿತೀಶ್. ಸ್ನೇಹಿತರ ಜೊತೆ ಸೇರಿ ಒಟ್ಟಾಗಿ ಬಿಸಿನೆಸ್ ಮಾಡುತ್ತಿದ್ದರು. ಹಣಕಾಸಿನ ವಹಿವಾಟಿನ ವಿಚಾರದಲ್ಲಿ ಇವರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಹತ್ಯೆಗೆ ಸ್ಕೆಚ್ ಹಾಕಿದ್ದರು. ಮಾತಿಗೆ ಮಾತು ಬೆಳೆದು ಆರೋಪಿಗಳು ಚೂರಿಯಿಂದ ಬಸವಂತನಿಗೆ ನಾಲ್ಕು ಬಾರಿ ಚುಚ್ಚಿ ಪರಾರಿಯಾಗಿದ್ದಾರೆ.
ತೀವ್ರ ರಕ್ತಸ್ರಾವವಾಗಿರುವ ಬಸವಂತನ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೂ ಈ ಕೃತ್ಯವೆಸಗಿದ ಬಳಿಕ ಶಿವಯ್ಯಾ ಮತ್ತು ನಿತೀಶ್ ತಲೆಮರೆಸಿಕೊಂಡಿದ್ದು, ಅವರು ಗೋವಾ ಅಥವಾ ಮಹಾರಾಷ್ಟ್ರದಲ್ಲಿ ಇದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.






