Home State Politics National More
STATE NEWS

BJP ಶಾಸಕ ಸಿ.ಕೆ. ರಾಮಮೂರ್ತಿರವರ Instagram ಹ್ಯಾಕ್; ಯುವತಿಗೆ ಅಸಂಬದ್ಧ ಸಂದೇಶ!

MLA C.K. Ramamurth
Posted By: Meghana Gowda
Updated on: Jan 7, 2026 | 8:02 AM

ಬೆಂಗಳೂರು: ಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ (MLA C.K. Ramamurthy) ಅವರ ಅಧಿಕೃತ ಇನ್‌ಸ್ಟಾಗ್ರಾಮ್ (Instagram) ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದು, ಹ್ಯಾಕ್ ಆದ ಬೆನ್ನಲ್ಲೇ ಆ ಖಾತೆಯಿಂದ ಯುವತಿಯೊಬ್ಬರಿಗೆ ಅಸಂಬದ್ಧವಾಗಿ ಸಂದೇಶಗಳನ್ನು ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ವಿವರ:

ಶಾಸಕರ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಪರಿಚಿತ ಯುವತಿಯೊಬ್ಬರಿಗೆ “ಗುಡ್ ಮಾರ್ನಿಂಗ್” (Good Morning) ಮತ್ತು “ಗುಡ್ ಈವಿನಿಂಗ್” (Good Evening) ಎಂಬ ಸಂದೇಶಗಳು ಹೋಗಿವೆ. ಈ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಶಾಸಕ ಸಿ.ಕೆ. ರಾಮಮೂರ್ತಿ, “ನನ್ನ ಮೊಬೈಲ್ ಅಥವಾ ಸಾಮಾಜಿಕ ಜಾಲತಾಣದ ಖಾತೆ ಹ್ಯಾಕ್ ಆಗಿದೆ. ಆ ಸಂದೇಶಗಳನ್ನು ನಾನು ಕಳುಹಿಸಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ತಮ್ಮ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಕಿಡಿಕಾರಿರುವ ಶಾಸಕರು, ಕೆಲವೇ ಕ್ಷಣಗಳಲ್ಲಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ತೀರ್ಮಾನಿಸಿದ್ದಾರೆ.

Shorts Shorts