ಬೆಂಗಳೂರು: ನಟಿ ಪವಿತ್ರಾ ಗೌಡ (Pavithra Gowda) ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಪುತ್ರಿ ಖುಷಿ ಗೌಡ (Khushi Gowda) ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಾಯಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಬೆನ್ನಲ್ಲೇ ಮಗಳು ಮಾಡಿರುವ ಈ ಭಾವುಕ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ತಾಯಿಯ ಫೋಟೋ ಹಂಚಿಕೊಂಡಿರುವ ಖುಷಿ ಗೌಡ, “ಹ್ಯಾಪಿ ಬರ್ತಡೇ ಮೈ ಫಾರೆವರ್ ಕ್ಯೂಟಿ” (Happy Birthday my forever cutie) ಎಂದು ಬರೆದು ಶುಭ ಕೋರಿದ್ದಾರೆ.
ಸಮಯ ಎಷ್ಟು ವೇಗವಾಗಿ ಹಾರಿ ಹೋಗುತ್ತಿದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಆದರೆ ನಿನ್ನ ಜೊತೆ ಕಳೆದ ಸಮಯ ತುಂಬ ಕಡಿಮೆ ಎನಿಸುತ್ತಿದೆ ಎಂದು ಬರೆಯುವ ಮೂಲಕ ತಾಯಿಯ ಜೊತೆಗಿನ ಒಡನಾಟವನ್ನು ನೆನೆದಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 (A1) ಆರೋಪಿಯಾಗಿದ್ದು, ಸದ್ಯ ಜೈಲಿನಲ್ಲಿದ್ದಾರೆ. ತಾಯಿಯ ಅನುಪಸ್ಥಿತಿಯಲ್ಲಿ ಮಗಳು ಈ ಪೋಸ್ಟ್ ಹಾಕುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.






