ಬಳ್ಳಾರಿ: ಬಿಟಿಎಂ ಲೇಔಟ್ ಗುಂಡಿನ ಚಕಮಕಿ ಮತ್ತು ರಾಜಶೇಖರ್ ಸಾವಿನ ಪ್ರಕರಣದಲ್ಲಿ ಸಾಕ್ಷ್ಯ ನಾಶದ ಸಂಚು ನಡೆದಿದೆ ಎಂದು ಮಾಜಿ ಸಚಿವ ಶ್ರೀರಾಮುಲು (B Sriramulu) ಗಂಭೀರ ಆರೋಪ ಮಾಡಿದ್ದಾರೆ. ರಾಜಶೇಖರ್ ದೇಹದಲ್ಲಿದ್ದ ಬುಲೆಟ್‌ಗಳ ಸತ್ಯಾಂಶ ಹೊರಬರಬಾರದು ಎಂಬ ಕಾರಣಕ್ಕೆ ಕುಟುಂಬದವರನ್ನು ಬೆದರಿಸಿ ಶವ ಸಂಸ್ಕಾರ ಮಾಡಿಸಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ರಾಜಶೇಖರ್ ದೇಹದಲ್ಲಿ ಮೊದಲು 5 ಗುಂಡುಗಳು ಹೊಕ್ಕಿದ್ದವು ಎಂಬ ಮಾಹಿತಿ ಇತ್ತು. ಈ ಸತ್ಯ ಹೊರಬರಬಾರದು ಮತ್ತು ದೇಹವನ್ನು ಮತ್ತೆ ಪರೀಕ್ಷೆ (Re-examining) ಮಾಡಬಾರದು ಎಂಬ ಉದ್ದೇಶದಿಂದ ಬಾಡಿಯನ್ನು ಸುಟ್ಟು ಹಾಕಲಾಗಿದೆ. ರೆಡ್ಡಿ ಸಮುದಾಯದಲ್ಲಿ ಮೃತದೇಹವನ್ನು ಹೂಳುವ (Burying) ಪದ್ಧತಿ ಇದೆ. ರಾಜಶೇಖರ್ ತಂದೆ ತೀರಿಕೊಂಡಾಗಲೂ ಹೂಳಲಾಗಿತ್ತು. ಈ ಬಾರಿ ಕೂಡ ಮಣ್ಣು ಮಾಡಲು ಗುಂಡಿ ತೋಡಲಾಗಿತ್ತು. ಆದರೆ ಪೊಲೀಸರು ಮತ್ತು ಪ್ರಭಾವಿಗಳು ಕುಟುಂಬಸ್ಥರ ಮೇಲೆ ಒತ್ತಡ ಹಾಕಿ ಸುಟ್ಟು ಹಾಕಿಸಿದ್ದಾರೆ (Burning) ಎಂದು ಹೇಳಿದ್ದಾರೆ.
ಕುಟುಂಬಸ್ಥರನ್ನು ಬೆದರಿಸಿ ಅವರ ಸಂಪ್ರದಾಯಕ್ಕೆ ವಿರುದ್ಧವಾಗಿ ಅಂತ್ಯಕ್ರಿಯೆ ನಡೆಸುವಂತೆ ಮಾಡಲಾಗಿದೆ. ದೇಹದ ಒಳಗಿದ್ದ ಬುಲೆಟ್‌ಗಳ ಸಾಕ್ಷ್ಯ ಸಿಗಬಾರದು ಎಂಬುದೇ ಇದರ ಹಿಂದಿನ ಪ್ಲಾನ್ . ಮೃತದೇಹಕ್ಕೆ ಎರಡು ಬಾರಿ ಪೋಸ್ಟ್‌ಮಾರ್ಟಮ್ ಮಾಡಿದ್ದರೂ ಸಹ ಸತ್ಯಾಂಶವನ್ನು ಮುಚ್ಚಿಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.






