ಬೆಂಗಳೂರು: ಸ್ಯಾಂಡಲ್‌ವುಡ್‌ನ ಗ್ಲೋಬಲ್ ಸ್ಟಾರ್ ಯಶ್ (Yash) ಜನವರಿ 8ರಂದು ತಮ್ಮ 40ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಸಂಭ್ರಮಕ್ಕೆ ಒಂದು ದಿನ ಮುಂಚಿತವಾಗಿಯೇ ಅಭಿಮಾನಿಯೊಬ್ಬರ ವಿಶಿಷ್ಟ ವಿಡಿಯೋ ಮತ್ತು ಸ್ನೇಹಿತರ ಮೆಟ್ರೋ ಉಡುಗೊರೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ.
ಯಶ್ ಅವರ ಅಪ್ಪಟ ಅಭಿಮಾನಿ ಗುರು (Guru Graphy) ಎಂಬುವವರು ಯಶ್ ಅವರ ಬಾಲ್ಯದ ದಿನಗಳಿಂದ ಇಂದಿನ ಸೂಪರ್ ಸ್ಟಾರ್ ಹಂತದವರೆಗಿನ ಜರ್ನಿಯನ್ನು ಒಳಗೊಂಡ ವಿಶೇಷ ‘Transition’ ವಿಡಿಯೋ ಸಿದ್ಧಪಡಿಸಿ ಒಂದು ದಿನ ಮುಂಚಿತವಾಗಿಯೇ ಶುಭ ಕೋರಿದ್ದಾರೆ. ಯಶ್ ಅವರ ಹಂತ ಹಂತದ ಬೆಳವಣಿಗೆಯನ್ನು ಅದ್ಭುತವಾಗಿ ತೋರಿಸುವ ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಈಗಾಗಲೇ 165K ಗೂ ಅಧಿಕ ವೀಕ್ಷಣೆ ಪಡೆದಿದೆ.
ಇದೇ ಗುರು ಅವರು ಈ ಹಿಂದೆ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಮಾಡಿದ ವಿಡಿಯೋ ಬರೋಬ್ಬರಿ 4.8 Million ವೀಕ್ಷಣೆ ಪಡೆದಿದ್ದು, ಸ್ವತಃ ಸುದೀಪ್ ಅವರೇ ಧನ್ಯವಾದ ತಿಳಿಸಿದ್ದರು. ಅಲ್ಲದೆ, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜನ್ಮದಿನದ ವಿಡಿಯೋ ಕೂಡ 1.4 Million ವೀಕ್ಷಣೆ ಕಂಡು ಭಾರಿ ಸದ್ದು ಮಾಡಿತ್ತು.
ನೆನ್ನೆ ಯಶ್ ಅವರ ಆಪ್ತ ಸ್ನೇಹಿತರೆಲ್ಲರೂ ಸೇರಿ ಬೆಂಗಳೂರು ಮೆಟ್ರೋ ಇತಿಹಾಸದಲ್ಲೇ ಮೊದಲ ಬಾರಿಗೆ ರೈಲಿನ ಮೇಲೆ ಯಶ್ ಅವರ ಬೃಹತ್ ಪೋಸ್ಟರ್‌ಗಳನ್ನು ರಾರಾಜಿಸುವಂತೆ ಮಾಡುವ ಮೂಲಕ ಅಚ್ಚರಿ ನೀಡಿದ್ದರು.






