ಬಳ್ಳಾರಿ: ನಗರದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಡಿಜಿಟಲ್ ಹಾಗೂ ಫಿಜಿಕಲ್ ಸಾಕ್ಷ್ಯಗಳ ಆಧಾರದ ಮೇಲೆ ಈಗಾಗಲೇ 26 ಜನರನ್ನು ಬಂಧಿಸಿದ್ದಾರೆ (Arrested). ಈಗ ಪ್ರಕರಣದ ಮುಂದಿನ ಹಂತವಾಗಿ ಘಟನೆಯಲ್ಲಿ ಭಾಗಿಯಾದ ಮತ್ತು ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಮುಖ ನಾಯಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ (Notice) ನೀಡಲಾಗಿದೆ.
ಗಾಲಿ ಜನಾರ್ದನ ರೆಡ್ಡಿ (G. Janardhana Reddy), ಬಿ. ಶ್ರೀರಾಮುಲು (B. Sriramulu), ಜಿ. ಸೋಮಶೇಖರ್ ರೆಡ್ಡಿ, ಮಾಜಿ ಶಾಸಕ ಸುರೇಶ್ ಬಾಬು, ರೆಡ್ಡಿ ಆಪ್ತ ಅಲಿಖಾನ್ (Ali Khan) ಸೇರಿದಂತೆ ಒಟ್ಟು 33 ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ನೋಟಿಸ್ ನೀಡಿದ್ದಾರೆ.
ನೋಟಿಸ್‌ಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಪ್ರತಿಕ್ರಯಿಸಿ, ಗಲಭೆಯಲ್ಲಿ ಭಾಗಿಯಾಗದಿದ್ದರೂ ಮುಂಚೂಣಿ ಕಾರ್ಯಕರ್ತರನ್ನು ಗುರಿಯಾಗಿಸಿ ನೋಟಿಸ್ ನೀಡಲಾಗುತ್ತಿದೆ. 39 ವಾರ್ಡ್‌ಗಳ ಅನ್ವಯ ಪಟ್ಟಿ ಸಿದ್ಧಪಡಿಸಿ ಬಿಜೆಪಿಯವರನ್ನು ಮಾತ್ರ ಟಾರ್ಗೆಟ್ (Target) ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಗಲಭೆ ನಡೆದ ಸ್ಥಳದಲ್ಲಿ ಇರದವರಿಗೂ ನೋಟಿಸ್ ನೀಡಲಾಗಿದೆ. ಇದು ರಾಜಕೀಯ ಪ್ರೇರಿತ ಪಿತೂರಿ ಎಂದು ಶಾಸಕ ಜನಾರ್ದನ ರೆಡ್ಡಿ ಅವರು ಕೂಡ ಕಿಡಿಕಾರಿದ್ದಾರೆ.






