ಬೆಂಗಳೂರು: ಬೀದಿನಾಯಿಗಳ ಹಾವಳಿಯಿಂದ ನಗರದ ಜನತೆ ಕಂಗೆಟ್ಟಿದ್ದರೆ ಎಂಬುದರ ವಿರುದ್ದ ನಟಿ ರಮ್ಯಾ (Ramya) ಅವರು ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ನಾಯಿಗಳು ಆಕ್ರಮಣಕಾರಿಯಲ್ಲ ಎಂದು ಬಿಂಬಿಸಲು ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಪುಟ್ಟ ಬಾಲಕಿಯೊಬ್ಬಳ ಜೊತೆ ನಾಯಿಗಳು ಪ್ರೀತಿಯಿಂದ ಆಟವಾಡುತ್ತಿರುವ ವಿಡಿಯೋವನ್ನು ರಮ್ಯಾ ಶೇರ್ ಮಾಡುವುದರ ಮೂಲಕ, ನಾಯಿಗಳು ಹುಟ್ಟುತ್ತಲೇ ಆಕ್ರಮಣಕಾರಿಯಲ್ಲ. ಅವುಗಳನ್ನು ಪ್ರೀತಿಯಿಂದ ಕಂಡರೆ ಅವುಗಳೂ ಪ್ರೀತಿ ತೋರುತ್ತವೆ. ಹಾಗಾಗಿ ನಾಯಿಗಳನ್ನು ಶೆಲ್ಟರ್‌ಗಳಿಗೆ (Shelters) ಸ್ಥಳಾಂತರಿಸುವ ನಿರ್ಧಾರ ಸರಿಯಲ್ಲ ಎಂದು ಅವರು ವಿರೋಧಿಸಿದ್ದಾರೆ.
ನಾಯಿಗಳ ಮನಸ್ಸು ಅರ್ಥವಾಗಲ್ಲ ಎಂದಿದ್ದ ನ್ಯಾಯಾಲಯದ ಅಭಿಪ್ರಾಯವನ್ನು ಪ್ರಶ್ನಿಸಿದ್ದ ರಮ್ಯಾ, ಮನುಷ್ಯನ ಮನಸ್ಸು ಕೂಡ ಅರ್ಥವಾಗಲ್ಲ, ಯಾವಾಗ ರೇಪ್ ಅಥವಾ ಕೊಲೆ ಮಾಡುತ್ತಾನೋ ಗೊತ್ತಿಲ್ಲ. ಹಾಗಂತ ಎಲ್ಲ ಪುರುಷರನ್ನೂ ಜೈಲಿಗೆ ಹಾಕಲು ಸಾಧ್ಯವೇ?” ಎಂದು ಪ್ರಶ್ನಿಸಿ ನೆನ್ನೆ ಕೂಡ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಆದರೆ ನಂದಿನಿ ಲೇಔಟ್‌ನಲ್ಲಿ (Nandini Layout) ವ್ಯಕ್ತಿಯೊಬ್ಬ ವಾಕಿಂಗ್ ಮಾಡುವಾಗ ಐದಾರು ನಾಯಿಗಳು ಬೆನ್ನಟ್ಟಿರುವ ವಿಡಿಯೋವನ್ನು ನಾಗರಿಕರು ಶೇರ್ ಮಾಡುವ ಮೂಲಕ, ಬೆಳಗ್ಗೆ ವಾಕಿಂಗ್ ಹೋಗಲು ಭಯವಾಗುತ್ತಿದೆ. ಈ ನಾಯಿಗಳ ಹಾವಳಿಗೆ ಕಡಿವಾಣ ಇಲ್ಲವೇ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಬೀದಿನಾಯಿಗಳ ಹಾವಳಿಯ ಬಗ್ಗೆ ಜನರು ಜಿಬಿಎ (JBA) ಅಧಿಕಾರಿಗಳಿಗೆ ದೂರು ನೀಡುತ್ತಿದ್ದು, ಶೀಘ್ರ ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದಾರೆ.






