ಶಿವಮೊಗ್ಗ: ಶಿವಮೊಗ್ಗ ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯ ಪೇದೆ ಜಕ್ರಿಯಾ (55) ಅವರು ಠಾಣೆಯ ಒಳಗೇ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide)ಮಾಡಿಕೊಂಡಿದ್ದಾರೆ.
ಶಿವಮೊಗ್ಗ ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆ (Doddapete Police Station ವ್ಯಾಪ್ತಿ)ಯ ಪೇದೆ ಬುಧವಾರ ರಾತ್ರಿ ಕರ್ತವ್ಯ ಮುಗಿಸಿ ಬಂದ ಜಕ್ರಿಯಾ ಅವರು ಠಾಣೆಯಲ್ಲೇ ಪೊಲೀಸ್ ಸಮವಸ್ತ್ರದಲ್ಲೇ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ತಮ್ಮ ಸಹೋದ್ಯೋಗಿಗಳು ಹಾಗೂ ಸಹ ಸಿಬ್ಬಂದಿ ಪದೇ ಪದೇ ಕಿಂಡಲ್ (Mocking/Harassment) ಮಾಡುತ್ತಿದ್ದ ಕಾರಣಕ್ಕೆ ಮನನೊಂದು ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಡೆತ್ ನೋಟ್‌ನಲ್ಲಿ ಬರೆದಿರುವುದು ಕಂಡು ಬಂದಿದೆ.
ಳೆದ ನಾಲ್ಕೈದು ವರ್ಷಗಳಿಂದ ಅವರು ಇದೇ ಪಶ್ಚಿಮ ಟ್ರಾಫಿಕ್ ಠಾಣೆಯಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಇವರಿಗೆ, ಇತ್ತೀಚೆಗಷ್ಟೇ ಎಎಸ್ಐ (ASI) ಆಗಿ ಬಡ್ತಿ ದೊರೆತಿತ್ತು. ಆದರೆ, ಅವರು ಆ ಬಡ್ತಿಯನ್ನು ನಿರಾಕರಿಸಿ ಮುಖ್ಯ ಪೇದೆ ಹುದ್ದೆಯಲ್ಲೇ ಮುಂದುವರಿದಿದ್ದರು.
ಘಟನೆ ತಿಳಿಯುತ್ತಿದ್ದಂತೆ ಶಿವಮೊಗ್ಗ ಎಸ್ಪಿ ನಿಖಿಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡೆತ್ ನೋಟ್ ಮತ್ತು ಜಕ್ರಿಯಾ ಅವರ ಮೊಬೈಲ್ ಫೋನ್ ಅನ್ನು ತನಿಖೆಗಾಗಿ ವಶಪಡಿಸಿಕೊಳ್ಳಲಾಗಿದೆ.






