Home State Politics National More
STATE NEWS

Health Study: ಹಿರಿಯರಲ್ಲಿ ರಕ್ತದೊತ್ತಡ ನಿಯಂತ್ರಣಕ್ಕೆ ಈ ಜ್ಯೂಸ್ ರಾಮಬಾಣ!

Senior men wearing funny sunglasses drinking juice with straw. Elderly friends with crazy eyewear having juice indoors.
Posted By: Rashmi Yadav
Updated on: Jan 10, 2026 | 9:00 AM

ಕೇವಲ ಒಂದು ತರಕಾರಿಯ ಜ್ಯೂಸ್ ವೃದ್ಧರಲ್ಲಿ ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ಅಧ್ಯಯನವೊಂದರಲ್ಲಿ ಕಂಡುಬಂದಿದೆ. ಅಮೆರಿಕಾದಲ್ಲಿ ನಡೆದ, ‘ಫ್ರೀ ರಾಡಿಕಲ್ ಬಯಾಲಜಿ ಮತ್ತು ಮೆಡಿಸಿನ್’ (Free Radical Biology and Medicine) ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ದಿನಕ್ಕೆ ಎರಡು ಬಾರಿ ಬೀಟ್‌ರೂಟ್ ಜ್ಯೂಸ್ ಕುಡಿಯುವುದರಿಂದ 67 ರಿಂದ 79 ವರ್ಷ ವಯಸ್ಸಿನವರಲ್ಲಿ ಕೇವಲ ಎರಡೇ ವಾರಗಳಲ್ಲಿ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಎಂದು ಕಂಡುಬಂದಿದೆ.

ಆಹಾರ ಪದ್ಧತಿ, ಬಾಯಿಯ ಆರೋಗ್ಯ ಮತ್ತು ಹೃದಯದ ಕಾರ್ಯನಿರ್ವಹಣೆಯ ನಡುವಿನ ಕುತೂಹಲಕಾರಿ ಸಂಬಂಧವನ್ನು ಈ ಸಂಶೋಧನೆ ಎತ್ತಿ ಹಿಡಿದಿದ್ದು, ಮುಖ್ಯವಾಗಿ ನಮ್ಮ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಹೃದಯದ ಆರೋಗ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬುದನ್ನು ಇದು ಸಾಬೀತುಪಡಿಸಿದೆ.

ವಿಜ್ಞಾನ ಏನು ಹೇಳುತ್ತದೆ?: ಗುಟ್ಟು ಇರುವುದು ಬಾಯಿಯಲ್ಲಿ!

ಬೀಟ್‌ರೂಟ್ ಜ್ಯೂಸ್‌ನಲ್ಲಿರುವ ಅಧಿಕ ನೈಟ್ರೇಟ್ ಅಂಶವೇ ಇದರ ಆರೋಗ್ಯ ಸಂಬಂಧಿ ಪ್ರಯೋಜನಗಳಿಗೆ ಕಾರಣ ಎಂದು ಅಧ್ಯಯನ ಬಹಿರಂಗಪಡಿಸಿದೆ. ನಾವು ಬೀಟ್‌ರೂಟ್‌ನ್ನು ಸೇವಿಸಿದಾಗ, ಈ ನೈಟ್ರೇಟ್‌ಗಳು ನಮ್ಮ ಬಾಯಿಯಲ್ಲಿರುವ ಸೂಕ್ಷ್ಮಜೀವಿಗಳೊಂದಿಗೆ (Oral Microbiome) ಬೆರೆಯುತ್ತವೆ. ಸಂಶೋಧಕರ ಪ್ರಕಾರ, ನಿರ್ದಿಷ್ಟ ಬ್ಯಾಕ್ಟೀರಿಯಾಗಳು ಈ ನೈಟ್ರೇಟ್‌ಗಳನ್ನು ‘ನೈಟ್ರಿಕ್ ಆಕ್ಸೈಡ್’ ಆಗಿ ಪರಿವರ್ತಿಸುತ್ತವೆ. ಈ ಸಂಯುಕ್ತವು ರಕ್ತನಾಳಗಳನ್ನು ಸಡಿಲಗೊಳಿಸಲು ಮತ್ತು ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಈ ಅಧ್ಯಯನದಲ್ಲಿ ಒಟ್ಟು 78 ಮಂದಿ ಭಾಗವಹಿಸಿದ್ದು, ಅವರನ್ನು ಯುವಕರು(18–30 ವರ್ಷ) ಮತ್ತು ಹಿರಿಯರು (67–79 ವರ್ಷ) ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು.

  • ಅಧ್ಯಯನದಲ್ಲಿ ಪಾಲ್ಗೊಂಡವರು ಎರಡು ವಾರಗಳ ಅವಧಿಯಲ್ಲಿ ನೈಟ್ರೇಟ್ ಸಮೃದ್ಧ ಬೀಟ್‌ರೂಟ್ ಜ್ಯೂಸ್, ಪ್ಲಸೀಬೊ ಜ್ಯೂಸ್ ಅಥವಾ ಮೌತ್ ವಾಶ್ ಅನ್ನು ಬಳಸಿದರು.
  • ಫಲಿತಾಂಶ: ಕೇವಲ ಹಿರಿಯ ನಾಗರಿಕರ ಗುಂಪಿನಲ್ಲಿ ಮಾತ್ರ ರಕ್ತದೊತ್ತಡದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.
  • ದಿನಚರಿ: ಭಾಗವಹಿಸಿದವರು ಬೆಳಿಗ್ಗೆ ಮತ್ತು ಸಂಜೆ ತಲಾ 70 ಮಿಲಿ ಲೀಟರ್ ಬೀಟ್‌ರೂಟ್ ಜ್ಯೂಸ್ ಕುಡಿದಿದ್ದರು.

ತಜ್ಞರ ಅಭಿಪ್ರಾಯ

ಈ ಫಲಿತಾಂಶಗಳು ಆಶಾದಾಯಕವಾಗಿದ್ದರೂ, ಸಮತೋಲಿತ ದೃಷ್ಟಿಕೋನ ಅಗತ್ಯ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. “ಬೀಟ್‌ರೂಟ್‌ನಂತಹ ತರಕಾರಿಗಳನ್ನು ಹೆಚ್ಚು ತಿನ್ನುವುದು ಹೃದಯದ ಆರೋಗ್ಯಕ್ಕೆ ಸಹಾಯ ಮಾಡಬಹುದು, ಆದರೆ ಇದು ಆರೋಗ್ಯಕರ ಜೀವನಶೈಲಿಯ ಒಂದು ಭಾಗವಷ್ಟೇ ಎಂಬುದನ್ನು ನೆನಪಿಡಬೇಕು,” ಎಂದು ತಿಳಿಸಿದ್ದಾರೆ. 

ಉಪ್ಪು ಸೇವನೆ ಕಡಿಮೆ ಮಾಡುವುದು, ನಿಯಮಿತ ವ್ಯಾಯಾಮ ಮತ್ತು ಉತ್ತಮ ಆಹಾರ ಸೇವನೆಯ ಜೊತೆಗೆ ಬೀಟ್‌ರೂಟ್ ಜ್ಯೂಸ್ ಅನ್ನು ದಿನಕ್ಕೆ ಎರಡು ಬಾರಿಯಂತೆ ಸೇವಿಸಿದರೆ ಕೇವಲ 2 ವಾರಗಳಲ್ಲಿ ಉತ್ತಮ ಫಲಿತಾಂಶ ದೊರೆಯಬಹುದು. 

 

Shorts Shorts