ಹಾಸನ: ಸ್ಯಾಂಡಲ್‌ವುಡ್ ನಟ ಯಶ್ ಅವರ ತಾಯಿ ಪುಷ್ಪಾ (Actor Yash mother Pushpa) ಮತ್ತು ಹಾಸನದ ವಿದ್ಯಾನಗರದ ನಿವಾಸಿ ದೇವರಾಜು ಎಂಬುವವರ ನಡುವೆ ನಿವೇಶನಕ್ಕೆ ಸಂಬಂಧಿಸಿದಂತೆ ಕಿತ್ತಾಟ ಶುರುವಾಗಿದ್ದು, ತನ್ನ ನಿವೇಶನದ ಕಾಂಪೌಂಡ್ ಅನ್ನು ಅಕ್ರಮವಾಗಿ ತೆರವುಗೊಳಿಸಲಾಗಿದೆ ಎಂದು ಆರೋಪಿಸಿ ಪುಷ್ಪಾ ಅವರು ಪೊಲೀಸರ ಮೊರೆ ಹೋಗಿದ್ದಾರೆ.
ಕಳೆದ ಭಾನುವಾರ ಪುಷ್ಪಾ ಅವರ ಮನೆಗೆ ಹೊಂದಿಕೊಂಡಂತಿರುವ ನಿವೇಶನದ ಮಾಲೀಕ ದೇವರಾಜು ಅವರು ಸೈಟ್ ಬಿಡಿಸುವ ನೆಪದಲ್ಲಿ ಕಾಂಪೌಂಡ್ ಅನ್ನು ತೆರವುಗೊಳಿಸಿದ್ದರು. ಇದು ಜಾಗದ ಒತ್ತುವರಿ ಮತ್ತು ಅಕ್ರಮ ಕೃತ್ಯ. ಹಾಗೂ ದೇವರಾಜು ಅವರು ತಮ್ಮ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಪುಷ್ಪಾ ದೂರಿದ್ದರೆ.
ಕಾಂಪೌಂಡ್ ತೆರವುಗೊಳಿಸಿ ಕಿರಿಕ್ ಮಾಡಿರುವ ದೇವರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಪುಷ್ಪಾ ಅವರು ಹಾಸನದ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ.






