Home State Politics National More
STATE NEWS

Tumakuru | ಹೊಟ್ಟೆ ನೋವು ತಾಳಲಾರದೆ ನೇ*ಣಿಗೆ ಶರಣಾದ 19ರ ಯುವತಿ

Jarkiholi Brothers (1)
Posted By: Meghana Gowda
Updated on: Jan 12, 2026 | 9:03 AM

ತುಮಕೂರು: ಒಳ್ಳೆಯ ಕೆಲಸ ಹುಡುಕಿ ಬದುಕು ಕಟ್ಟಿಕೊಳ್ಳಬೇಕೆಂಬ ಕನಸಿನೊಂದಿಗೆ ಬಂದಿದ್ದ 19 ವರ್ಷದ ಯುವತಿ, ಋತುಚಕ್ರದ ಹೊಟ್ಟೆ ನೊವು ತಾಳಲಾಗದೆ  ನೇಣಿಗೆ ಶರಣಾದ ಘಟನೆ ತುಮಕೂರು ತಾಲೂಕಿನ ಬ್ಯಾತ ಗ್ರಾಮದಲ್ಲಿ ನಡೆದಿದೆ.

ಮೃತ ದುರ್ದೈವಿ ಕೀರ್ತನಾ ಎಂದು ಗುರುತಿಸಲಾಗಿದೆ. ಈಕೆ ಮೂಲತಃ ಕಲಬುರ್ಗಿಯವರು. ಕೆಲಸ ಹುಡುಕುವ ಉದ್ದೇಶದಿಂದ ಕಳೆದ ಎರಡು ತಿಂಗಳ ಹಿಂದೆ ತುಮಕೂರಿನ ಬ್ಯಾತ ಗ್ರಾಮದಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದರು.

ಕಳೆದ ಕೆಲದಿನಗಳಿಂದ ತೀವ್ರವಾದ ಹೊಟ್ಟೆ (stomach pain) ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹಲವಾರು ಪ್ರಯತ್ನಗಳ ಹೊರತಾಗಿಯೂ ನೋವು ಕಡಿಮೆಯಾಗದಿದ್ದಕ್ಕೆ ಅವರು ಮಾನಸಿಕವಾಗಿ ಜಿಗುಪ್ಸೆಗೊಂಡಿದ್ದಳು. ಮನೆಯಲ್ಲಿ ಚಿಕ್ಕಪ್ಪ ಮತ್ತು ಇತರ ಸದಸ್ಯರು ಇಲ್ಲದ ಸಮಯವನ್ನು ಗಮನಿಸಿದ ಕೀರ್ತನಾ, ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಕ್ಯಾತಸಂದ್ರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Shorts Shorts