ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ (Upendra) ನಿರ್ದೇಶನ ಹಾಗೂ ಶಿವರಾಜ್‌ಕುಮಾರ್ (ShivaRajkumar) ನಟನೆಯ ‘ಓಂ’ ಸಿನಿಮಾ ಕನ್ನಡದ ಎವರ್‌ಗ್ರೀನ್ ಹಿಟ್. ಈ ಚಿತ್ರದ ಪ್ರತಿ ದೃಶ್ಯವೂ ಇಂದಿಗೂ ಸಿನಿ ಪ್ರೇಮಿಗಳ ಕಣ್ಣಮುಂದೆ ಹಸಿರಾಗಿದೆ.
ಇದೀಗ ಶಿವರಾಜ್‌ಕುಮಾರ್ ಅವರು ಚಿತ್ರದ ಸೂಪರ್ ಹಿಟ್ “ಹೇ ದಿನಕರ…” ಹಾಡಿನ ಸೂರ್ಯ ನಮಸ್ಕಾರ ಮಾಡುವ ದೃಶ್ಯವನ್ನು ರೀ-ಕ್ರಿಯೇಟ್ ಮಾಡಿದ್ದಾರೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಶಿವಣ್ಣ ಸೂರ್ಯ ನಮಸ್ಕಾರ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳಿಗೆ ಹಳೆಯ ನೆನಪುಗಳನ್ನು ಮರುಕಳಿಸಿದೆ.
ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಬಾರಿ ಮರುಬಿಡುಗಡೆಯಾದ ದಾಖಲೆ ‘ಓಂ’ ಚಿತ್ರಕ್ಕಿದೆ. ಇಲ್ಲಿಯವರೆಗೆ ಸುಮಾರು 550ಕ್ಕೂ ಹೆಚ್ಚು ಬಾರಿ ಈ ಸಿನಿಮಾ ರೀ-ರಿಲೀಸ್ ಆಗಿದೆ. ಸದ್ಯದಲ್ಲೇ ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ‘ಓಂ’ ಆರ್ಭಟ ಶುರುವಾಗಲಿದ್ದು, ಬಿಡುಗಡೆಯ ಅಧಿಕೃತ ದಿನಾಂಕ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ ಎಂದು ತಿಳಿದು ಬಂದಿದೆ.






