S Shorts

Air Quality | ರಾಜಧಾನಿಗಿಂತಲೂ ಮಲೆನಾಡಿನಲ್ಲೇ ಹೆಚ್ಚು ಮಾಲಿನ್ಯ!

Posted By: Meghana Gowda
Updated: Feb 9, 2026 | 9:24 AM

ಬೆಂಗಳೂರು: ರಾಜ್ಯದಲ್ಲಿ ಚಳಿ ಕಡಿಮೆಯಾಗಿ ಬಿಸಿಲು ಏರುತ್ತಿದ್ದಂತೆಯೇ ವಾಯು ಮಾಲಿನ್ಯದ ಭೀತಿ ಎದುರಾಗಿದೆ. ಕಳೆದ ಎರಡು ದಿನಗಳಿಂದ ಸುಧಾರಣೆ ಕಂಡಿದ್ದ ಬೆಂಗಳೂರಿನ ವಾಯು ಗುಣಮಟ್ಟ (AQI) ಇಂದು ಮತ್ತೊಮ್ಮೆ ಕುಸಿತ ಕಂಡಿದೆ. ಬೆಂಗಳೂರಿನ ಜೊತೆಗೆ ಮಲೆನಾಡು ಶಿವಮೊಗ್ಗದಲ್ಲೂ ಗಾಳಿಯ ಗುಣಮಟ್ಟ ಹದಗೆಟ್ಟಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ನಗರಗಳ ಇಂದಿನ ವಾಯು ಗುಣಮಟ್ಟ (AQI) ವಿವರ:

ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾನದಂಡಗಳ ಪ್ರಕಾರ, ಪ್ರಸ್ತುತ ರಾಜ್ಯದ ಹಲವು ನಗರಗಳಲ್ಲಿನ ಗಾಳಿಯು ಆರೋಗ್ಯಕ್ಕೆ ಹಾನಿಕರವಾಗಿದೆ.

ನಗರ ಇಂದಿನ AQI ಮಟ್ಟ ಸ್ಥಿತಿ
ಶಿವಮೊಗ್ಗ 196 ಅನಾರೋಗ್ಯಕರ (Unhealthy)
ಬೆಂಗಳೂರು 177 ಅನಾರೋಗ್ಯಕರ
ಮಂಗಳೂರು 175 ಅನಾರೋಗ್ಯಕರ
ಮೈಸೂರು 171 ಅನಾರೋಗ್ಯಕರ
ಬೆಳಗಾವಿ 166 ಅನಾರೋಗ್ಯಕರ
ಬಳ್ಳಾರಿ 162 ಅನಾರೋಗ್ಯಕರ
ಉಡುಪಿ 160 ಅನಾರೋಗ್ಯಕರ

ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ ದಿಢೀರ್ ಏರಿಕೆ:

ಮೂರು-ನಾಲ್ಕು ದಿನಗಳ ಹಿಂದೆ 100ರ ಆಸುಪಾಸಿನಲ್ಲಿದ್ದ ಮಂಗಳೂರಿನ(Shivamogga) AQI ಇಂದು ಏಕಾಏಕಿ 175ಕ್ಕೆ ತಲುಪಿರುವುದು ಆಶ್ಚರ್ಯ ಮೂಡಿಸಿದೆ. ಇನ್ನು ಶಿವಮೊಗ್ಗವು (Shivamogga) 196 ಅಂಕಗಳೊಂದಿಗೆ ರಾಜ್ಯದಲ್ಲೇ ಅತಿ ಹೆಚ್ಚು ಮಾಲಿನ್ಯ ಹೊಂದಿದ ನಗರವಾಗಿ ಪಟ್ಟಿಯಲ್ಲಿದೆ.

ತಜ್ಞರ ಎಚ್ಚರಿಕೆ ಮತ್ತು ಸಲಹೆ:

ಗಾಳಿಯ ಗುಣಮಟ್ಟ ಹೀಗೆಯೇ ಕುಸಿಯುತ್ತಿದ್ದರೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಉಸಿರಾಟದ ತೊಂದರೆ ಇರುವವರು ಹೊರಗಡೆ ಸಂಚರಿಸುವಾಗ ಮಾಸ್ಕ್ ಧರಿಸುವುದು ಹಾಗೂ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.