ಅಹಮದಾಬಾದ್: ಐಸಿಸಿ ಟಿ20 ವಿಶ್ವಕಪ್ 2026 ರ (T20 World Cup 2026) ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಗೆಳತಿ ಮಹಿಕಾ ಶರ್ಮಾ ಅವರಿಗೆ ಮೈದಾನದಿಂದಲೇ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ಪಂದ್ಯದ ವೇಳೆ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಪಾಂಡ್ಯ, ಸ್ಟೇಡಿಯಂನಲ್ಲಿದ್ದ ಪ್ರೇಯಸಿಗೆ ಮುತ್ತಿನ ಸುರಿಮಳೆಗೈದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಹಾರ್ದಿಕ್ ಪಾಂಡ್ಯ ಮತ್ತು ಮಹಿಕಾ ಶರ್ಮಾ ಆಗಾಗ್ಗೆ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಸಾರ್ವಜನಿಕವಾಗಿ ಕೈ ಕೈ ಹಿಡಿದು ಓಡಾಡುವುದು, ಪರಸ್ಪರ ಅಪ್ಪಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲೂ ಬ್ಯಾಟಿಂಗ್ ಮಾಡುವಾಗ ಹಾಗೂ ಬೌಂಡರಿ ಲೈನ್‌ನಲ್ಲಿ ನಿಂತಿದ್ದಾಗ ಪಾಂಡ್ಯ ತಮ್ಮ ಗೆಳತಿಯತ್ತ ನೋಡಿ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ. ಈ ಪಂದ್ಯದಲ್ಲಿ 30 ರನ್‌ಗಳ ಮಹತ್ವದ ಕಾಣಿಕೆ ನೀಡಿದ ಪಾಂಡ್ಯ, ಇನ್ನಿಂಗ್ಸ್ ಮುಗಿದ ಬಳಿಕವೂ ಮಹಿಕಾ ಜೊತೆ ಕೆಲಕಾಲ ಮಾತನಾಡುತ್ತಿರುವುದು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ.
ಇದಕ್ಕೂ ಮುನ್ನ, ಮಹಿಕಾ ಶರ್ಮಾ ಅವರ ಹುಟ್ಟುಹಬ್ಬದ ಪ್ರಯುಕ್ತ ಹಾರ್ದಿಕ್ ಪಾಂಡ್ಯ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಶುಭಾಶಯ ಕೋರಿದ್ದರು. ಶ್ರೀಲಂಕಾದ ಸ್ವಿಮ್ಮಿಂಗ್ ಪೂಲ್‌ನಲ್ಲಿ ಇಬ್ಬರೂ ಒಟ್ಟಿಗಿರುವ ರೊಮ್ಯಾಂಟಿಕ್ ಫೋಟೋವನ್ನು ಹಂಚಿಕೊಂಡಿದ್ದ ಪಾಂಡ್ಯ, ಮಹಿಕಾರನ್ನು ‘ನನ್ನ ರಾಜಕುಮಾರಿ’ (Princess) ಎಂದು ಪ್ರೀತಿಯಿಂದ ಕರೆದು ಗಮನ ಸೆಳೆದಿದ್ದರು.
ಹಾರ್ದಿಕ್ ಪಾಂಡ್ಯರ ಈವರೆಗಿನ ಪ್ರದರ್ಶನ:
ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಮಿಶ್ರ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಪಂದ್ಯದಲ್ಲಿ ಅಮೆರಿಕ ವಿರುದ್ಧ 5 ರನ್, ನಮೀಬಿಯಾ ವಿರುದ್ಧ 52 ರನ್, ಪಾಕಿಸ್ತಾನದ ವಿರುದ್ಧ ಶೂನ್ಯಕ್ಕೆ ಔಟಾಗಿದ್ದ ಅವರು, ಇದೀಗ ನೆದರ್ಲೆಂಡ್ಸ್ ವಿರುದ್ಧ 30 ರನ್ ಗಳಿಸಿದ್ದಾರೆ. ಈ ಏರಿಳಿತಗಳ ನಡುವೆಯೂ ಪಾಂಡ್ಯ ಭಾರತ ತಂಡದ ಪ್ರಮುಖ ಆಟಗಾರ ಹಾಗೂ ಮ್ಯಾಚ್ ವಿನ್ನರ್ ಆಗಿ ತಂಡದಲ್ಲಿ ಮುಂದುವರಿದಿದ್ದಾರೆ.
ಟೀಮ್ ಇಂಡಿಯಾದ ಸೂಪರ್-8 ವೇಳಾಪಟ್ಟಿ:
ಭಾರತ ತಂಡವು ಗುಂಪು ಹಂತದಲ್ಲಿ ಯಾವುದೇ ಕಠಿಣ ಪೈಪೋಟಿಯಿಲ್ಲದೆ ಸುಲಭವಾಗಿ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದೆ. ಈ ಮಹತ್ವದ ಹಂತದಲ್ಲಿ ಭಾರತದ ಮುಂದಿನ ಪಂದ್ಯಗಳ ವಿವರ ಈ ಕೆಳಗಿನಂತಿದೆ:
ಫೆಬ್ರವರಿ 22: ಭಾರತ vs ದಕ್ಷಿಣ ಆಫ್ರಿಕಾ (ಅಹಮದಾಬಾದ್)
ಫೆಬ್ರವರಿ 26: ಭಾರತ vs ಜಿಂಬಾಬ್ವೆ (ಚೆನ್ನೈ)
ಮಾರ್ಚ್ 1: ಭಾರತ vs ವೆಸ್ಟ್ ಇಂಡೀಸ್ (ಕೋಲ್ಕತ್ತಾ)






