S Shorts

Yash Makeover | ಗಡ್ಡಕ್ಕೆ ಕತ್ತರಿ ಹಾಕಿದ ಯಶ್; ‘ಟಿಕೆಟ್’ ಪಾತ್ರದ ಮೇಕೋವರ್ ವಿಡಿಯೋ ಭಾರಿ ವೈರಲ್!

Posted By: Meghana Gowda
Updated: Feb 23, 2026 | 12:46 PM

ಬೆಂಗಳೂರು: ‘ಕೆಜಿಎಫ್’ ಸರಣಿಯ ಯಶಸ್ಸಿನ ನಂತರ ಸ್ಯಾಂಡಲ್‌ವುಡ್ ಅಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲಿ ಮಿಂಚುತ್ತಿರುವ ರಾಕಿಂಗ್ ಸ್ಟಾರ್ ಯಶ್ (Rocking Star Yash), ಇದೀಗ ತಮ್ಮ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾಗಾಗಿ ಭರ್ಜರಿ ಮೇಕೋವರ್ ಮಾಡಿಕೊಂಡಿದ್ದಾರೆ. ಸುಮಾರು ಐದಾರು ವರ್ಷಗಳಿಂದ ಕಾಪಾಡಿಕೊಂಡಿದ್ದ ತಮ್ಮ ಐಕಾನಿಕ್ ಉದ್ದ ಗಡ್ಡ ಮತ್ತು ಮೀಸೆಯ ಲುಕ್‌ಗೆ ಬ್ರೇಕ್ ನೀಡಿರುವ ಯಶ್, ಈಗ ಕಂಪ್ಲೀಟ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.
https://www.instagram.com/reel/DVFd5rxkqve/?utm_source=ig_web_copy_link&igsh=MzRlODBiNWFlZA==

ಕೆಜಿಎಫ್ ಸಿನಿಮಾದಿಂದಲೂ ಉದ್ದ ಗಡ್ಡದಲ್ಲೇ ಇದ್ದ ಯಶ್, ಈಗ ‘ಟಾಕ್ಸಿಕ್’ ಸಿನಿಮಾದ ‘ಟಿಕೆಟ್’ (Ticket) ಎಂಬ ಪಾತ್ರಕ್ಕಾಗಿ ತಮ್ಮ ಲುಕ್ ಬದಲಿಸಿದ್ದಾರೆ. ಹೊಸ ಮೇಕಿಂಗ್ ವಿಡಿಯೋದಲ್ಲಿ ಯಶ್ ಅತ್ಯಂತ ಯುವಕರಾಗಿ ಮತ್ತು ಟ್ರಿಮ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಈ ಹೊಸ ಅವತಾರ ನೋಡಿ ಫಿದಾ ಆಗಿದ್ದಾರೆ.

ಯಶ್ ಅವರ ಈ ಹೊಸ ಲುಕ್ ಸಿದ್ಧವಾಗುವ ಹಂತದ ಮೇಕಿಂಗ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಟ್ರೆಂಡ್ ಆಗುತ್ತಿದೆ.