S Shorts

ದಕ್ಷಿಣ ಭಾರತದ 13 ಲಕ್ಷ ಮಹಿಳೆಯರಿಗೆ ‘ಅಯೋಡಿನ್’ ಪಾಠ: ಆಶೀರ್ವಾದ್ ಸ್ಮಾರ್ಟ್ ಇಂಡಿಯಾ ಜಾಗೃತಿ ಅಭಿಯಾನ ಯಶಸ್ವಿ

ದಕ್ಷಿಣ ಭಾರತದ 13 ಲಕ್ಷ ಮಹಿಳೆಯರಿಗೆ ‘ಅಯೋಡಿನ್’ ಪಾಠ: ಆಶೀರ್ವಾದ್ ಸ್ಮಾರ್ಟ್ ಇಂಡಿಯಾ ಜಾಗೃತಿ ಅಭಿಯಾನ ಯಶಸ್ವಿ
Author: Sagaradventure
Posted By: Sagaradventure
Updated: Nov 1, 2026 | 3:11 PM

ಬೆಂಗಳೂರು: ಅಯೋಡಿನ್ ಯುಕ್ತ ಉಪ್ಪನ್ನು ಗುರುತಿಸುವುದು, ಅದನ್ನು ಸರಿಯಾಗಿ ಶೇಖರಿಸಿಡುವುದು ಹಾಗೂ ಅಡುಗೆಯಲ್ಲಿ ಬಳಸುವ ವಿಧಾನಗಳ ಕುರಿತು ಮಹಿಳೆಯರಿಗೆ ಪ್ರಾಯೋಗಿಕ ಅರಿವು ಮೂಡಿಸುವಲ್ಲಿ ‘ಆಶೀರ್ವಾದ್ ಸ್ಮಾರ್ಟ್ ಇಂಡಿಯಾ ಕಾರ್ಯಕ್ರಮ’ (ASIP) ಭಾರಿ ಯಶಸ್ಸು ಕಂಡಿದೆ.

ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ 32 ಜಿಲ್ಲೆಗಳಲ್ಲಿ ಕಳೆದ ಎರಡು ವರ್ಷಗಳಿಂದ ನಡೆದ ಈ ಬೃಹತ್ ಅಭಿಯಾನದಲ್ಲಿ 13 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಹದಿಹರೆಯದವರು ಪಾಲ್ಗೊಂಡಿದ್ದರು. ‘ಜಾಗತಿಕ ಅಯೋಡಿನ್ ಕೊರತೆ ಅಸ್ವಸ್ಥತೆಗಳ ತಡೆಗಟ್ಟುವಿಕೆ ದಿನ’ದ ಹಿನ್ನೆಲೆಯಲ್ಲಿ ಬಿಡುಗಡೆಯಾದ 2025-26ರ ಅಂತ್ಯದ ವರದಿಯ ಪ್ರಕಾರ, ಈ ಕಾರ್ಯಕ್ರಮದಿಂದಾಗಿ ಜನರ ಒಟ್ಟಾರೆ ಅಯೋಡಿನ್ ಜ್ಞಾನದಲ್ಲಿ ಶೇ. 37ರಷ್ಟು ಹಾಗೂ ಮೂಲಭೂತ ಅರಿವಿನಲ್ಲಿ ಶೇ. 26ರಷ್ಟು ಗಣನೀಯ ಏರಿಕೆಯಾಗಿದೆ.

ಬರೀ ಭಾಷಣವಲ್ಲ, ಪ್ರಾಯೋಗಿಕ ಶಿಕ್ಷಣ: 

ಜನರಿಗೆ ಕೇವಲ ಮಾಹಿತಿ ನೀಡದೆ, ‘ಅಯೋಡಿನ್ ಸಭೆ’ಗಳು ಹಾಗೂ ಬೀದಿ ನಾಟಕಗಳ ಮೂಲಕ ಪ್ರಾಯೋಗಿಕ ಶಿಕ್ಷಣ ನೀಡಲಾಗಿದೆ. 10 ಲಕ್ಷಕ್ಕೂ ಹೆಚ್ಚು ಜನರು ಅಯೋಡಿನ್ ಸಭೆಗಳಲ್ಲಿ ಪಾಲ್ಗೊಂಡರೆ, 3.22 ಲಕ್ಷ ಜನರನ್ನು ಬೀದಿ ನಾಟಕಗಳ ಮೂಲಕ ತಲುಪಲಾಗಿದೆ. 1,712 ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ 178 ಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗಿದ್ದು, ಸ್ಥಳೀಯ ಮಹಿಳೆಯರನ್ನೇ ‘ಅಯೋಡಿನ್ ಚಾಂಪಿಯನ್‌’ಗಳಾಗಿ ರೂಪಿಸಿ ಜಾಗೃತಿಯನ್ನು ಮನೆಮನೆಗೆ ತಲುಪಿಸಲಾಗಿದೆ.

ತಜ್ಞರ ಅಭಿಪ್ರಾಯವೇನು?: 

ಸ್ಥಳೀಯ ಭಾಷೆಯಲ್ಲಿ ವೈಜ್ಞಾನಿಕ ಮಾಹಿತಿಯನ್ನು ನಿರಂತರವಾಗಿ ನೀಡಿದಾಗ ಅದು ದೈನಂದಿನ ಆಚರಣೆಯಾಗಿ ಬದಲಾಗುತ್ತದೆ ಎನ್ನುತ್ತಾರೆ ಐಟಿಸಿಯ (ITC) ಬ್ಯುಸಿನೆಸ್ ಯುನಿಟ್ ಚೀಫ್ ಎಕ್ಸಿಕ್ಯೂಟಿವ್ ಅನುಜ್ ರುಸ್ತಗಿ. ಗರ್ಭಾವಸ್ಥೆ ಮತ್ತು ಬಾಲ್ಯದಲ್ಲಿ ಅಯೋಡಿನ್ ಕೊರತೆಯು ಮಕ್ಕಳ ಬುದ್ಧಿಮತ್ತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ, ಹೀಗಾಗಿ ಅಡುಗೆಯಲ್ಲಿ ಸರಿಯಾದ ಬಳಕೆಯ ಜ್ಞಾನ ಅತ್ಯಗತ್ಯ ಎಂದು ಡಾ. ಶಂತನು ಅಭಿಪ್ರಾಯಪಟ್ಟಿದ್ದಾರೆ.

“ಜನರು ದಿನಕ್ಕೆ ಗರಿಷ್ಠ 5 ಗ್ರಾಂ ಮಾತ್ರ ಉಪ್ಪು ತಿನ್ನಬೇಕು, ಆದರೆ ತಿಂದ ಉಪ್ಪು ಕಡ್ಡಾಯವಾಗಿ ಅಯೋಡಿನ್ ಯುಕ್ತವಾಗಿರಬೇಕು” ಎಂದು ಪೌಷ್ಟಿಕಾಂಶ ತಜ್ಞ ಡಾ. ರಂಜನ್ ಶಂಕರ್ ಕಿವಿಮಾತು ಹೇಳಿದ್ದಾರೆ. ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಡೆವಲಪ್‌ಮೆಂಟ್ ಸಹಯೋಗದಲ್ಲಿ ಇತ್ತೀಚೆಗೆ ನಡೆದ ವೆಬಿನಾರ್‌ನಲ್ಲಿ ಈ ಮಹತ್ವದ ಸಮೀಕ್ಷಾ ವರದಿಯನ್ನು ಮಂಡಿಸಲಾಯಿತು.