S Shorts

Adichunchanagiri | ಪ್ರಧಾನಿ ಮೋದಿ ಆಗಮನಕ್ಕೆ ಕ್ಷಣಗಣನೆ: ವೇದಿಕೆಯಲ್ಲಿ ಕೇವಲ 9 ಗಣ್ಯರಿಗೆ ಮಾತ್ರ ಆಸನ!

Adichunchanagiri | ಪ್ರಧಾನಿ ಮೋದಿ ಆಗಮನಕ್ಕೆ ಕ್ಷಣಗಣನೆ: ವೇದಿಕೆಯಲ್ಲಿ ಕೇವಲ 9 ಗಣ್ಯರಿಗೆ ಮಾತ್ರ ಆಸನ!
Author: Meghana Gowda
Posted By: Meghana Gowda
Updated: Apr 15, 2026 | 11:13 AM

ನಾಗಮಂಗಲ: ಆದಿಚುಂಚನಗಿರಿ (Adichunchanagiri ) ಕ್ಷೇತ್ರದ ಕ್ರೀಡಾಂಗಣದಲ್ಲಿ ನಡೆಯಲಿರುವ ಐತಿಹಾಸಿಕ ವೇದಿಕೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ( PM Narendra Modi)  ಅವರ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಕಾರ್ಯಕ್ರಮದ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ವೇದಿಕೆಯಲ್ಲಿ ಪ್ರಧಾನಿ ಸೇರಿದಂತೆ ಕೇವಲ 9 ಮಂದಿ ಗಣ್ಯರಿಗೆ ಮಾತ್ರ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.

ವೇದಿಕೆಯಲ್ಲಿ ಆಸನ ಪಡೆದ 9 ಗಣ್ಯರು:

ಕಾರ್ಯಕ್ರಮದ ಶಿಷ್ಟಾಚಾರದಂತೆ ವೇದಿಕೆಯ ಮೇಲೆ ಪ್ರಧಾನಿ ಮೋದಿಯವರ ಜೊತೆ ಈ ಕೆಳಗಿನ ಗಣ್ಯರು ಮಾತ್ರ ಉಪಸ್ಥಿತರಿರಲಿದ್ದಾರೆ:

  1. ನರೇಂದ್ರ ಮೋದಿ – ಭಾರತದ ಪ್ರಧಾನ ಮಂತ್ರಿಗಳು.

  2. ಡಾ. ನಿರ್ಮಲಾನಂದನಾಥ ಸ್ವಾಮೀಜಿ – ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರು.

  3. ಸ್ವಾಮಿ ಪರಮಾತ್ಮಾನಂದ ಸರಸ್ವತಿ ಜೀ – ಖ್ಯಾತ ಆಧ್ಯಾತ್ಮಿಕ ಗುರುಗಳು.

  4. ಹೆಚ್.ಡಿ. ದೇವೇಗೌಡ – ಮಾಜಿ ಪ್ರಧಾನ ಮಂತ್ರಿಗಳು.

  5. ಥಾವರ್ ಚಂದ್ ಗೆಹ್ಲೋಟ್ – ಕರ್ನಾಟಕದ ರಾಜ್ಯಪಾಲರು.

  6. ಹೆಚ್.ಡಿ. ಕುಮಾರಸ್ವಾಮಿ – ಕೇಂದ್ರ ಸಚಿವರು.

  7. ಶೋಭಾ ಕರಂದ್ಲಾಜೆ – ಕೇಂದ್ರ ಸಚಿವರು.

  8. ಎನ್. ಚಲುವರಾಯಸ್ವಾಮಿ – ರಾಜ್ಯ ಸಚಿವರು (ಜಿಲ್ಲಾ ಉಸ್ತುವಾರಿ ಸಚಿವರು).

  9. ಆರ್. ಅಶೋಕ್ – ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರು.

ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಲಕ್ಷಾಂತರ ಭಕ್ತರು ಮತ್ತು ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರಧಾನಿಗಳ ಭೇಟಿಯ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಕಾರ್ಯಕ್ರಮದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.