S Shorts

Bengaluru ನಗರದಲ್ಲಿ ಮತ್ತೊಂದು ರೋಡ್ ರೇಜ್: 1 ಕಿ.ಮೀ ಚೇಸ್ ಮಾಡಿ BMTC ಚಾಲಕನ ಮೇಲೆ ಹ*ಲ್ಲೆ!

Bengaluru ನಗರದಲ್ಲಿ ಮತ್ತೊಂದು ರೋಡ್ ರೇಜ್: 1 ಕಿ.ಮೀ ಚೇಸ್ ಮಾಡಿ BMTC ಚಾಲಕನ ಮೇಲೆ ಹ*ಲ್ಲೆ!
Author: Meghana Gowda
Posted By: Meghana Gowda
Updated: Dec 10, 2025 | 5:07 AM

ಬೆಂಗಳೂರು:  ನಗರದಲ್ಲಿ ರೋಡ್ ರೇಜ್ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿದ್ದು, ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಕ್ಯಾಬ್ (Cab) ಚಾಲಕನೊಬ್ಬ ಬಿಎಂಟಿಸಿ (BMTC) ಬಸ್‌ನ ಚಾಲಕ ಮತ್ತು ಕಂಡಕ್ಟರ್ (Conductor) ಮೇಲೆ ಹಲ್ಲೆ (Assault) ಮಾಡಿರುವ ಘಟನೆ ನಡೆದಿದೆ.

ಮಂಗಳವಾರ ಬೆಳಗ್ಗೆ 11.30 ರ ಸುಮಾರಿಗೆ ಈ ಘಟನೆ ನಡೆದಿದೆ. ಶಿವಾಜಿನಗರದಿಂದ (Shivajinagar) ಯಲಹಂಕಕ್ಕೆ (Yelahanka) ಹೋಗುತ್ತಿದ್ದ ಬಿಎಂಟಿಸಿ ಬಸ್ಸಿಗೆ ಕ್ಯಾಬ್ ಒಂದು ಟಚ್ ಆಗಿದ್ದು, ಕ್ಯಾಬ್ ಚಾಲಕ ನರಸಿಂಹಯ್ಯ ಎಂಬಾತ ಬಸ್ಸನ್ನು ಸುಮಾರು 1 ಕಿಲೋಮೀಟರ್  ದೂರದವರೆಗೆ ಚೇಸ್ (Chase) ಮಾಡಿಕೊಂಡು ಬಂದು, ಸಂಪಿಗೆ ಹಳ್ಳಿ ಪೊಲೀಸ್ ಠಾಣಾ (Sampige Halli Police Station) ವ್ಯಾಪ್ತಿಯ ಹೆಗ್ಡೆ ನಗರದಲ್ಲಿ  ಬಸ್ ಅನ್ನು ತಡೆದಿದ್ದಾನೆ.

ನಂತರ ಬಸ್‌ನ ಚಾಲಕ ನಾಗೇಶ್ ಮತ್ತು ಕಂಡಕ್ಟರ್ ಕೆಂಚಪ್ಪ ಅವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾನೆ.  ಕೂಡಲೇ ಬಸ್‌ನ ಚಾಲಕ, ಬಸ್ಸನ್ನು ನೇರವಾಗಿ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯತ್ತ ತಿರುಗಿಸಿದ್ದಾರೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿ ಕ್ಯಾಬ್ ಚಾಲಕ ನರಸಿಂಹಯ್ಯನನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ದೃಶ್ಯಗಳು ಬಸ್‌ನ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಪೊಲೀಸರು ಅದನ್ನು ಪರಿಶೀಲಿಸುತ್ತಿದ್ದಾರೆ.