ಬೆಂಗಳೂರು: ಇನ್ಸ್ಟಾಗ್ರಾಂ ಮೂಲಕ ಚಿಗುರೊಡೆದಿದ್ದ 6 ವರ್ಷಗಳ ಪ್ರೀತಿ ಮದುವೆಯ ಹಂತಕ್ಕೆ ಬರುವ ಮುನ್ನವೇ ದುರಂತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದನೆಂಬ ಕಾರಣಕ್ಕೆ ಮನನೊಂದು ಯುವತಿಯೊಬ್ಬಳು ಪ್ರಿಯಕರನ ಮನೆಯಲ್ಲೇ ನೇ*ಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃ*ತ ದುರ್ದೈವಿಯನ್ನು ಹಾಸನ ಜಿಲ್ಲೆಯ ಅರಸಿಕೆರೆ ಮೂಲದ 19 ವರ್ಷದ ನಿಖಿತಾ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಿಯಕರ ರಾಘವೇಂದ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿಖಿತಾ ಹಾಗೂ ಪಿಲ್ಲಹಳ್ಳಿ ಗ್ರಾಮದ ರಾಘವೇಂದ್ರ ಇನ್ಸ್ಟಾಗ್ರಾಂ (Instagram) ಮೂಲಕ ಪರಿಚಯವಾಗಿ ಕಳೆದ 5-6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಹೊಸ ವರ್ಷದ ಸಂಭ್ರಮಾಚರಣೆಗಾಗಿ ಜನವರಿ 1ರಂದು ನಿಖಿತಾ ಅರಸಿಕೆರೆಯಿಂದ ರಾಘವೇಂದ್ರನ ಮನೆಗೆ ಬಂದಿದ್ದಳು.
ಈ ವೇಳೆ ಆಕೆ, “ನನ್ನನ್ನು ಮದುವೆಯಾಗು” ಎಂದು ರಾಘವೇಂದ್ರನಿಗೆ ಒತ್ತಾಯಿಸಿದ್ದಾಳೆ. ಆದರೆ, ರಾಘವೇಂದ್ರ “ಈಗಲೇ ಆಗಲ್ಲ, ಸ್ವಲ್ಪ ಸಮಯ ಬೇಕು” ಎಂದು ಸಬೂಬು ಹೇಳಿದ್ದಾನೆ ಎನ್ನಲಾಗಿದೆ. ಇದರಿಂದ ತೀವ್ರವಾಗಿ ನೊಂದ ನಿಖಿತಾ ಪ್ರಿಯಕರನ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾಳೆ.
ಆ*ತ್ಮಹ*ತ್ಯೆಗೂ ಮುನ್ನ ನಿಖಿತಾ ತನ್ನ ಪೋಷಕರಿಗೆ ಕರೆ ಮಾಡಿ, ತಾನು ಪ್ರಾ*ಣ ಕಳೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾಳೆ. ಗಾಬರಿಗೊಂಡ ಪೋಷಕರು ತಕ್ಷಣವೇ ಮರುಕರೆ ಮಾಡುವಷ್ಟರಲ್ಲಿ ದುರಂತ ಸಂಭವಿಸಿತ್ತು.
ಮಗಳ ಸಾ*ವಿನ ಸುದ್ದಿ ಕೇಳಿ ಬಂದ ಪೋಷಕರು, “ಇದು ಆ*ತ್ಮಹ*ತ್ಯೆಯಲ್ಲ, ಇದೊಂದು ಕೊ*ಲೆ. ಪ್ರೀತಿ ಮಾಡಿದ ಯುವಕನೇ ನಮ್ಮ ಮಗಳನ್ನು ಕೊಂ*ದು ನೇಣು ಹಾಕಿದ್ದಾನೆ” ಎಂದು ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ರಾಘವೇಂದ್ರನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ಬಂದ ನಂತರವಷ್ಟೇ ಇದು ಕೊ*ಲೆಯೇ ಅಥವಾ ಆ*ತ್ಮಹ*ತ್ಯೆಯೇ ಎಂಬುದು ಖಚಿತವಾಗಲಿದೆ.
