ಬೆಂಗಳೂರು: ಉದ್ಯಾನ ನಗರಿ ಬೆಂಗಳೂರು ಒಂದು ಕಾಲದಲ್ಲಿ ತನ್ನ ಕೆರೆಗಳಿಂದಲೇ ವಿಶ್ವವಿಖ್ಯಾತವಾಗಿತ್ತು. ಆದರೆ ಕಾಲಕ್ರಮೇಣ ನಿರ್ವಹಣೆಯ ಕೊರತೆಯಿಂದ ಕೆರೆಗಳು ಕಲುಷಿತಗೊಂಡಿದ್ದವು. ಈಗ ಇವುಗಳಿಗೆ ಕಾಯಕಲ್ಪ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮುಂದಾಗಿದ್ದು, ಪ್ರಮುಖ 10 ಕೆರೆಗಳಲ್ಲಿ ಬೋಟಿಂಗ್ ವ್ಯವಸ್ಥೆ ಜಾರಿಗೆ ತರಲು ಬೃಹತ್ ಯೋಜನೆಯನ್ನು ಪ್ರಸ್ತಾಪಿಸಿದೆ.
ಏನಿದು ಹೊಸ ಪ್ಲ್ಯಾನ್?
ನಗರದ ಒಟ್ಟು 183 ಕೆರೆಗಳ ಪೈಕಿ ಮೊದಲ ಹಂತದಲ್ಲಿ 10 ಕೆರೆಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (KLCDA) ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) ಸಹಯೋಗದೊಂದಿಗೆ ಈ ಯೋಜನೆ ಜಾರಿಯಾಗಲಿದೆ. ಕೆರೆಗಳ ಸ್ವಚ್ಛತೆ ಕಾಪಾಡುವುದು ಮತ್ತು ಪರಿಸರಕ್ಕೆ ಪೂರಕವಾದ ಬೋಟಿಂಗ್ (Eco-friendly Boating) ಮೂಲಕ ಆದಾಯ ಗಳಿಸಿ ಕೆರೆಗಳ ನಿರ್ವಹಣೆ ಮಾಡುವುದು.
ಬೋಟಿಂಗ್ ಆರಂಭವಾಗಲಿರುವ 10 ಕೆರೆಗಳು:
-
ಹಲಸೂರು ಲೇಕ್ (Ulsoor Lake)
-
ಸ್ಯಾಂಕಿ ಟ್ಯಾಂಕ್ (Sankey Tank)
-
ಮಡಿವಾಳ ಕೆರೆ (Madiwala Lake)
-
ಯಲಹಂಕ ಕೆರೆ (Yelahanka Lake)
-
ಬೇಗೂರು ಕೆರೆ (Begur Lake)
-
ರಾಚೇನಹಳ್ಳಿ ಕೆರೆ (Rachenahalli Lake)
-
ವೆಂಗಯ್ಯನ ಕೆರೆ (Vengayyana ಕೆರೆ – KR Puram)
-
ಕಗ್ಗದಾಸಪುರ ಕೆರೆ (Kaggadasapura Lake)
-
ನಾಯಂಡಹಳ್ಳಿ ಕೆರೆ (Nayandahalli Lake)
-
ರಾಮಪುರ ಕೆರೆ (Rampura Lake)
ಅಭಿವೃದ್ಧಿಯ ಆಯಾಮಗಳು:
ಬೋಟಿಂಗ್ ಮಾತ್ರವಲ್ಲದೆ, ಈ ಕೆರೆಗಳ ಸುತ್ತಮುತ್ತ ವಾಕಿಂಗ್ ಪಾತ್, ಮಕ್ಕಳ ಆಟದ ಮೈದಾನ ಮತ್ತು ಲೈಟಿಂಗ್ ವ್ಯವಸ್ಥೆ ಮಾಡುವ ಮೂಲಕ ಸಂಜೆ ವೇಳೆ ಕುಟುಂಬದೊಂದಿಗೆ ಕಳೆಯಲು ಯೋಗ್ಯವಾದ ತಾಣಗಳಾಗಿ ಇವುಗಳನ್ನು ಪರಿವರ್ತಿಸಲಾಗುತ್ತದೆ. ಇದರಿಂದ ಕೆರೆಗಳ ಒತ್ತುವರಿಗೂ ಬ್ರೇಕ್ ಬೀಳಲಿದೆ ಎಂಬುದು ಪ್ರಾಧಿಕಾರದ ಆಶಯ.
