S Shorts

ಬೆಂಗಳೂರಿನಲ್ಲಿ School ಬಸ್‌ಗೆ ರಾಯಚೂರಿನ ಕಂದಮ್ಮಗಳು ಬ*ಲಿ: ಹುಟ್ಟೂರಲ್ಲಿ ಮುಗಿಲು ಮುಟ್ಟಿದ ಆಕ್ರಂದನ!

ಬೆಂಗಳೂರಿನಲ್ಲಿ School ಬಸ್‌ಗೆ ರಾಯಚೂರಿನ ಕಂದಮ್ಮಗಳು ಬ*ಲಿ: ಹುಟ್ಟೂರಲ್ಲಿ ಮುಗಿಲು ಮುಟ್ಟಿದ ಆಕ್ರಂದನ!
Author: Sagaradventure
Posted By: Sagaradventure
Updated: Feb 12, 2026 | 10:54 AM

ರಾಯಚೂರು: ಬೆಂಗಳೂರಿನ ಥಣಿಸಂದ್ರದಲ್ಲಿ ಶಾಲಾ ಬಸ್ ಹರಿದು ಇಬ್ಬರು ಮುಗ್ಧ ಕಂದಮ್ಮಗಳು ದಾರುಣವಾಗಿ ಸಾ*ನ್ನಪ್ಪಿರುವ ಘಟನೆ ಇಡೀ ರಾಜ್ಯವನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ. ಮೃ*ತ ದುರ್ದೈವಿ ಮಕ್ಕಳಾದ ವರ್ಷಾ (2) ಹಾಗೂ ಭಾನು (4) ಅವರ ಮೃ*ದೇಹಗಳನ್ನು ಅವರ ಹುಟ್ಟೂರಾದ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ವಂದಾಲಿ ಗ್ರಾಮಕ್ಕೆ ತರಲಾಗಿದ್ದು, ಕರುಳಿನ ಕುಡಿಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಉದ್ಯೋಗ ಅರಸಿ ರಾಜಧಾನಿ ಬೆಂಗಳೂರಿಗೆ ವಲಸೆ ಹೋಗಿದ್ದ ಕುಟುಂಬಕ್ಕೆ ವಿಧಿಯು ಅಕ್ಷರಶಃ ಬರಸಿಡಿಲೆರಗಿದೆ. ಥಣಿಸಂದ್ರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಶಾಲಾ ಬಸ್ ಚಕ್ರದಡಿಗೆ ಸಿಲುಕಿ ಈ ಇಬ್ಬರು ಮುಗ್ಧೆಯರು ಪ್ರಾ*ಣ ಬಿಟ್ಟಿದ್ದಾರೆ. ಅರೆಗಳಿಗೆಯಲ್ಲಿ ತಮ್ಮಿಬ್ಬರು ಮಕ್ಕಳನ್ನು ಕಳೆದುಕೊಂಡ ಹೆತ್ತವರ ರೋದನ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ಕಂದಮ್ಮಗಳ ಮೃ*ತದೇಹಗಳನ್ನು ವಂದಾಲಿ ಗ್ರಾಮಕ್ಕೆ ತಂದಾಗ ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.

ಇಂದು ಅಂತ್ಯಕ್ರಿಯೆ: ಮೃ*ತ ಕಂದಮ್ಮಗಳಿಬ್ಬರ ಅಂತ್ಯಕ್ರಿಯೆಯು ಇಂದು ಅವರ ಹುಟ್ಟೂರಾದ ವಂದಾಲಿಯಲ್ಲಿಯೇ ನಡೆಯಲಿದ್ದು, ಗ್ರಾಮಸ್ಥರು ಮತ್ತು ಸಂಬಂಧಿಕರು ಕಂಬನಿ ಮಿಡಿಯುತ್ತಿದ್ದಾರೆ. ಮನೆಯ ಅಂಗಳದಲ್ಲಿ ಆಡಿ ನಲಿಯಬೇಕಿದ್ದ ಮುಗ್ಧ ಜೀವಗಳನ್ನು ಬ*ಲಿ ಪಡೆದ ಈ ದುರಂತವು, ವಾಹನ ಚಾಲಕರ ನಿರ್ಲಕ್ಷ್ಯದ ಬಗ್ಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.