S Shorts

ರಾಜೀನಾಮೆ ನೀಡಿದರೆ ಮುಲಾಜಿಲ್ಲದೆ ಅಂಗೀಕಾರ: ಅತೃಪ್ತ ಶಾಸಕರಿಗೆ CM ಡಿ.ಕೆ.ಶಿವಕುಮಾರ್ ಖಡಕ್ ಎಚ್ಚರಿಕೆ!

ರಾಜೀನಾಮೆ ನೀಡಿದರೆ ಮುಲಾಜಿಲ್ಲದೆ ಅಂಗೀಕಾರ: ಅತೃಪ್ತ ಶಾಸಕರಿಗೆ CM ಡಿ.ಕೆ.ಶಿವಕುಮಾರ್ ಖಡಕ್ ಎಚ್ಚರಿಕೆ!
Author: Sagaradventure
Posted By: Sagaradventure
Updated: Aug 4, 2026 | 11:17 AM

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದಿರುವ ಬಂಡಾಯಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೊಪ್ಪು ಹಾಕಿಲ್ಲ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡು ರಾಜೀನಾಮೆ ಬೆದರಿಕೆ ಹಾಕುತ್ತಿರುವ ಅತೃಪ್ತ ಶಾಸಕರಿಗೆ ಸಿಎಂ ಖಡಕ್ ಎಚ್ಚರಿಕೆ ನೀಡಿದ್ದಾರೆ.

“ಪಕ್ಷದ ಹಿತದೃಷ್ಟಿಯಿಂದ ನಾನು ಈ ಹಿಂದೆ ತಾಳ್ಮೆಯಿಂದ ಇರಲಿಲ್ಲವೇ? ಅದೇ ರೀತಿ ಎಲ್ಲರೂ ಪಕ್ಷದಲ್ಲಿ ತಾಳ್ಮೆಯಿಂದ ಇರಬೇಕು” ಎಂದು ಅತೃಪ್ತ ಶಾಸಕರಿಗೆ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ. ಒಂದು ವೇಳೆ ಬಂಡಾಯ ಮುಂದುವರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದರೆ, ಅದನ್ನು ಮುಲಾಜಿಲ್ಲದೆ ಅಂಗೀಕರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಯಾವುದೇ ಕಾರಣಕ್ಕೂ ಬಂಡಾಯ ಶಾಸಕರ ಬ್ಲ್ಯಾಕ್‌ಮೇಲ್ ತಂತ್ರಗಳಿಗೆ ಮಣಿಯಬಾರದು ಎಂದು ಕಾಂಗ್ರೆಸ್ ಹೈಕಮಾಂಡ್‌ನಿಂದಲೂ ಮುಖ್ಯಮಂತ್ರಿಗೆ ಸ್ಪಷ್ಟ ಸಂದೇಶ ರವಾನೆಯಾಗಿದೆ. ಹೈಕಮಾಂಡ್ ಬೆಂಬಲದೊಂದಿಗೆ ಸಿಎಂ ಡಿ.ಕೆ.ಶಿವಕುಮಾರ್ ಅತೃಪ್ತರ ವಿರುದ್ಧ ಈ ಕಠಿಣ ನಿಲುವು ತಾಳಿದ್ದು, ಬಂಡಾಯ ನಾಯಕರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.