S Shorts

CSK ಸ್ಟಾರ್ ಬೌಲರ್ ಮುಖೇಶ್ ಚೌಧರಿ ತಾಯಿ ನಿಧನ

CSK ಸ್ಟಾರ್ ಬೌಲರ್ ಮುಖೇಶ್ ಚೌಧರಿ ತಾಯಿ ನಿಧನ
Author: Savina Naik
Posted By: Savina Naik
Updated: Apr 23, 2026 | 2:01 PM

ನವದೆಹಲಿ  ಕಳೆದ ಒಂದು ವರ್ಷದಿಂದ ಅನಾರೋಗ್ಯದ ಬಳಲುತ್ತಿದ್ದ ಸಿಎಸ್‌ಕೆ (CSK) ಸ್ಟಾರ್ ಬೌಲರ್ ಮುಖೇಶ್ ಚೌಧರಿ ತಾಯಿ ಪ್ರೇಮ್ ದೇವಿ ಅವರು ಮುಂಬೈನ ಟಾಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ನಿಧನರಾಗಿದ್ದಾರೆ.

ಶನಿವಾರ (ಏ.18) ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸಿಎಸ್‌ಕೆ ಪಂದ್ಯದ ನಂತರ ಮುಖೇಶ್ ಚೌಧರಿ ಅವರು ರಾಜಸ್ಥಾನದ ಭಿಲ್ವಾರಾದ ತಮ್ಮ ಊರಿಗೆ ತೆರಳಿದರು. ಬಳಿಕ ಅಣ್ಣ ಡಾ. ರಾಜೇಶ್ ಚೌಧರಿ ಅವರೊಂದಿಗೆ ಸೇರಿ ತಾಯಿಯ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ.

ಚೆನ್ನೈಸೂಪರ್ ಕಿಂಗ್ಸ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮುಖೇಶ್ ಚೌಧರಿ ಅವರ ತಾಯಿಯ ನಿಧನಕ್ಕೆ ಶೋಕ ವ್ಯಕ್ತಪಡಿಸಿದೆ. ಈ ನೋವಿನ ಸಂದರ್ಭದಲ್ಲಿ ಮುಖೇಶ್ ಮತ್ತು ಅವರ ಕುಟುಂಬದೊಂದಿಗೆ ನಾವಿರುತ್ತೇವೆ ಎಂದು ಬರೆದುಕೊಂಡಿದೆ.